ಆಸ್ತಿ ತೆರಿಗೆ ವಿರುದ್ಧ ಮೇಲ್ಮನವಿ: ರಜನೀಕಾಂತ್ ಗೆ ಕೋರ್ಟ್ ಛೀಮಾರಿ

Prasthutha|

ಚೆನ್ನೈ: ತನ್ನ ರಾಘವೇಂದ್ರ ಕಲ್ಯಾಣ ಮಂಟಪಕ್ಕೆ 6.50 ಲಕ್ಷ ರೂಪಾಯಿ ಆಸ್ತಿ ತೆರಿಗೆಯನ್ನು ಕೊರಿದ ಚೆನ್ನೈ ಕಾರ್ಪೊರೇಶನ್ ವಿರುದ್ಧ ಮೇಲ್ಮನವಿ ಸಲ್ಲಿಸಿದ ರಜನಿಕಾಂತ್ ಗೆ ಮದ್ರಾಸ್ ಹೈಕೋರ್ಟ್ ಎಚ್ಚರಿಕೆಯನ್ನು ನೀಡಿದೆ.

- Advertisement -

ಅವರ ಮಂಟಪವು ತಮಿಳುನಾಡಿನ ಕೊಡಂಬಕಮ್ ನಲ್ಲಿದೆ.

ತೆರಿಗೆ ಬೇಡಿಕೆಯ ವಿರುದ್ಧ ಕೋರ್ಟ್ ಪ್ರವೇಶಿಸಿರುವುದಕ್ಕಾಗಿ ವೆಚ್ಚಗಳನ್ನು ವಿಧಿಸಲಾಗುವುದು. ತಮ್ಮ ಪ್ರಕರಣವನ್ನು ಹಿಂದೆಗೆಯಲು ಸಮಯ ನೀಡುವಂತೆ ಅವರ ವಕೀಲರು ನ್ಯಾಯಾಲಯವನ್ನು ಕೇಳಿದ್ದಾರೆ.  

- Advertisement -

2020ರ ಮಾರ್ಚ್ 24ರಿಂದ ತನ್ನ ಕಲ್ಯಾಣ ಮಂಟಪವು ಖಾಲಿ ಬಿದ್ದಿದೆ. ಆದಾಯವಿಲ್ಲದ ಕಾರಣ ತೆರಿಗೆ ನೀಡಲು ಸಾಧ್ಯವಿಲ್ಲ ಎಂದು ರಜನೀಕಾಂತ್ ಕೋರ್ಟ್ ಗೆ ಹೇಳಿದ್ದರು.

Join Whatsapp