ಅತ್ಯಾಚಾರ ಸಂತ್ರಸ್ತೆಯ ಸಾವು| ಬಲವಂತದ ಅಂತ್ಯಕ್ರಿಯೆ ನಡೆಸಿದ ಯುಪಿ ಪೊಲೀಸರು

Prasthutha: September 30, 2020

ಹೊಸದಿಲ್ಲಿ: ತನ್ನ ಪುತ್ರಿಯ ಮೃತದೇಹದ ಅಂತ್ಯ ಕ್ರಿಯೆಯನ್ನು ಉತ್ತರ ಪ್ರದೇಶ ಪೊಲೀಸರು ಮಧ್ಯ ರಾತ್ರಿಯ ವೇಳೆ ಬಲವಂತದಿಂದ ನಡೆಸಿದ್ದಾರೆ ಎಂದು ಹತ್ರಾಸ್   ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಹೆತ್ತವರು ಆರೋಪಿಸಿದ್ದಾರೆ.

ನಾಲ್ವರು ಉನ್ನತ ಜಾತಿ ಹಿಂದೂಗಳಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉತ್ತರ ಪ್ರದೇಶದ ಹತ್ರಾಸ್ ನ ಯುವತಿ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು.

“ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಈ ಅಂತ್ಯಕ್ರ್ಯಿಯನ್ನು ಮಾಡಲಾಗಿದೆ” ಎಂಬುದಾಗಿ‌ ಯುವತಿಯ ಸಹೋದರ ಹೇಳಿದ್ದಾರೆ.

“ಪೊಲೀಸರು ಮೃತದೇಹ ಮತ್ತು ನನ್ನ ತಂದೆಯನ್ನು ಬಲವಂತದಿಂದ ಅಂತ್ಯಕ್ರಿಯೆ ನಡೆಸಿದ್ದಾರೆ. ನನ್ನ ತಂದೆ ಹತ್ರಾಸ್ ತಲುಪಿದಾಗ ಪೊಲೀಸರು ಅವರನ್ನು ಕೂಡಲೆ ಸ್ಮಶಾನಕ್ಕೆ ಕರೆದೊಯ್ದಿದ್ದಾರೆ” ಎಂದು ಸಹೋದರ ಪಿಟಿಐಗೆ ಕರೆಮಾಡಿ ತಿಳಿಸಿದ್ದಾರೆ.

ಪ್ರಕರಣವನ್ನು ಮುಚ್ಚಿಹಾಕುವುದಕ್ಕಾಗಿ ಅವರು ಹಾಗೆ ಮಾಡಿದ್ದಾರೆ ಎಂದು ಯುವತಿಯ ಸಹೋದರ ಆರೋಪಿಸಿದ್ದಾರೆ. ಪೊಲೀಸರು ಬಲವಂತದಿಂದ ಕುಟುಂಬದವರನ್ನು ಮತ್ತು ನೆರೆಹೊರೆಯವರನ್ನು ಮನೆಯೊಳಗೆ ಕೂಡಿಹಾಕಿ ಮೃತದೇಹದ ಅಂತ್ಯಕ್ರಿಯೆಗೆ ಕೊಂಡೊಯ್ದರು ಎಂದು ಅವರು ಹೇಳಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ