Home ಟಾಪ್ ಸುದ್ದಿಗಳು ಚಲಿಸುತ್ತಿದ್ದ ಬಸ್’ನಿಂದ ಕೆಳಗೆ ಬಿದ್ದ ಮಹಿಳೆ: ಭಯಾನಕ ವಿಡಿಯೋ ವೈರಲ್..!

ಚಲಿಸುತ್ತಿದ್ದ ಬಸ್’ನಿಂದ ಕೆಳಗೆ ಬಿದ್ದ ಮಹಿಳೆ: ಭಯಾನಕ ವಿಡಿಯೋ ವೈರಲ್..!

ನಾಮಕ್ಕಲ್: ಮಹಿಳೆಯೊಬ್ಬರು ಚಲಿಸುತ್ತಿರುವ ಬಸ್’ನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ತಮಿಳುನಾಡಿನ ನಾಮಕ್ಕಲ್ ನಲ್ಲಿ ನಡೆದಿದೆ.


ಈ ದೃಶ್ಯ ಖಾಸಗಿ ಬಸ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಾರದಾ ಎಂಬ ಮಹಿಳೆ ಬಟ್ಟೆ ಖರೀದಿಸಲು ಜೇಡರಪಾಳ್ಯಂನಿಂದ ಸೇಲಂಗೆ ತೆರಳಿದ್ದು, ಖಾಸಗಿ ಬಸ್ ನಲ್ಲಿ ಮನೆಗೆ ಮರಳುತ್ತಿದ್ದರು. ಆಕೆ ಬಸ್ ನಿಂದ ಸುಮಾರು 20 ಅಡಿ ದೂರದಲ್ಲಿ ಬಿದ್ದಿದ್ದಾಳೆ, ಗಾಬರಿಗೊಂಡ ಪ್ರಯಾಣಿಕರು ಕಂಡಕ್ಟರ್ ಗೆ ಮಾಹಿತಿ ನೀಡಿ ಬಸ್ ನಿಲ್ಲಿಸಿದ್ದಾರೆ. ಪ್ರಯಾಣಿಕರು ಶಾರದಾಗೆ ಸಹಾಯ ಮಾಡಿದರು. ಚಿಕಿತ್ಸೆಗಾಗಿ ಸೇಲಂನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.


ಗಂಭೀರವಾಗಿ ಗಾಯಗೊಂಡಿದ್ದರೂ ಜೀವಕ್ಕೆ ಅಪಾಯವಿಲ್ಲ ಎಂಬುದು ತಿಳಿದುಬಂದಿದೆ.


ಈ ವಿಡಿಯೋದಲ್ಲಿ ಹಲವು ಮಹಿಳೆಯರು ನಿಂತು ಪ್ರಯಾಣಿಸುತ್ತಿರುವುದು ಕಂಡು ಬಂದಿದೆ, ಅವರಲ್ಲಿ ಶಾರದಾ ಬಾಗಿಲ ಮುಂದೆಯೇ ನಿಂತಿದ್ದರು, ಬಾಗಿಲು ತೆರೆದಿತ್ತು, ಮಹಿಳೆಯರು ಮತ್ತು ಮಕ್ಕಳು ಬಸ್ಸಿನ ಮುಂಭಾಗದಲ್ಲಿ ನಿಂತಿದ್ದರೆ, ಪುರುಷರು ಹಿಂಭಾಗದಲ್ಲಿ ನಿಂತಿದ್ದರು.

Join Whatsapp
Exit mobile version