ಮಧ್ಯಪ್ರದೇಶ: ಶಾಲೆಯಲ್ಲಿ ವಿಷಪೂರಿತ ಆಹಾರ ಸೇವಿಸಿ ಐವರು ಸಾವು, 38 ಮಕ್ಕಳು ಅಸ್ವಸ್ಥ

Prasthutha|

ಮಧ್ಯಪ್ರದೇಶದಲ್ಲಿರುವ ಯುಗಪುರುಷ ಧಾಮ್ ಬೌದ್ಧಿಕ ವಿಕಾಸ ಕೇಂದ್ರದಲ್ಲಿ ವಿಷಪೂರಿತ ಆಹಾರ ಸೇವಿಸಿ ಐದು ಮಕ್ಕಳು ಸಾವನ್ನಪ್ಪಿದ್ದು, 38 ಮಂದಿ ಅಸ್ವಸ್ಥರಾಗಿದ್ದಾರೆ. 38 ಮಕ್ಕಳ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

- Advertisement -


ಎಲ್ಲಾ ಮಕ್ಕಳು ನಗರದ ಸರ್ಕಾರಿ ಚಾಚಾ ನೆಹರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.


ಒಟ್ಟು 38 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಈ ನಾಲ್ವರು ಐಸಿಯು ವಾರ್ಡ್ ನಲ್ಲಿ ದಾಖಲಾಗಿದ್ದು, ಮುಂದಿನ 48 ಗಂಟೆಗಳ ಕಾಲ ಶಾಲೆಯಲ್ಲಿ ಯಾವುದೇ ಮಕ್ಕಳಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದರೆ, ಆಶ್ರಮದ ಮೇಲೆ ನಿಗಾ ಇಡುತ್ತೇವೆ ಎಂದು ಜಿಲ್ಲಾಧಿಕಾರಿ ಆಶೀಶ್ ಸಿಂಗ್ ತಿಳಿಸಿದ್ದಾರೆ.

Join Whatsapp
Exit mobile version