ಇನ್ಸ್‌ಪೆಕ್ಟರ್ ಸೇರಿ ಮೂವರಿಗೆ ಕಚ್ಚಿದ ಪೊಲೀಸರೇ ಸಾಕುತ್ತಿದ್ದ ನಾಯಿ!

Prasthutha|

ಚಾಮರಾಜನಗರ: ಪೊಲೀಸರು ಆಹಾರ ನೀಡುತ್ತಾ ಸಾಕಿದ್ದ ನಾಯಿಯೊಂದು ಮೂವರಿಗೆ ಕಚ್ಚಿದ ಘಟನೆ ಗುಂಡ್ಲುಪೇಟೆ ಪೊಲೀಸ್ ಠಾಣಾ ಆವರಣದಲ್ಲಿ ನಡೆದಿದೆ.

- Advertisement -

ಠಾಣೆಯ ಇನ್ಸ್‌ಪೆಕ್ಟರ್, ಶಿಕ್ಷಕ ಹಾಗೂ ಮತ್ತೊಬ್ಬರಿಗೆ ಪೊಲೀಸರು ಸಾಕುತ್ತಿದ್ದ ಬೀದಿ ನಾಯಿ ಕಚ್ಚಿ.

ಮೊಬೈಲ್ ಕಳೆದುಕೊಂಡಿದ್ದಕ್ಕಾಗಿ ದೂರು ಕೊಡಲು ಠಾಣೆಗೆ ಬಂದಿದ್ದ ಶಿಕ್ಷಕರೊಬ್ಬರು ಪೊಲೀಸ್ ಪೇದೆಯೊಬ್ಬರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಹಿಂಬದಿಯಿಂದ ಬಂದು ಬಲಗಾಲಿಗೆ ಈ ನಾಯಿ ಕಚ್ಚಿತ್ತು. ಅವರು ದೂರು ನೀಡುವುದನ್ನು ಬದಿಗೊತ್ತಿ ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಪಡೆದಿದ್ದಾರೆ. ಇದಾದ ನಂತರ ಸ್ನೇಹಿತರೊಂದಿಗೆ ಬಂದಿದ್ದ ಮತ್ತೊಬ್ವರನ್ನು ಇದೇ ನಾಯಿ ಕಚ್ಚಿದೆ.

- Advertisement -

ಅಷ್ಟರಲ್ಲೇ ಠಾಣೆಗೆ ಬಂದ ಪೊಲೀಸ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ ಅವರರನ್ನೂ ಇದೇ ಬೀದಿ ನಾಯಿ ಕಚ್ಚಿದ್ದು ಇವರು ಕೂಡ ಚಿಕಿತ್ಸೆಗೆ ತೆರಳಿದ್ದಾರೆ.

ಠಾಣೆ ಬಳಿಯೇ ಇದ್ದ ಬೀದಿ ನಾಯಿ ಈ ಹಿಂದೆ ಹುಚ್ಚುನಾಯಿ ಕಡಿತಕೊಳಕ್ಕಾಗಿದ್ದ ಹಿನ್ನಲೆ ಚುಚ್ಚುಮದ್ದು ಕೊಡಿಸಲಾಗಿತ್ತು. ಇದರಿಂದ ಯಾವುದೇ ತೊಂದರೆ ಮಾಡದೇ ನಾಯಿ ಠಾಣೆ ಬಳಿ ಇರುತ್ತಿತ್ತು. ಠಾಣಾ ಸಿಬ್ಬಂದಿ ಬ್ರೆಡ್, ಮಿಕ್ಕಿದ ಅನ್ನ ಚಪಾತಿ ಹಾಕುತ್ತಾ ಇದನ್ನು ಸಾಕುತ್ತಿದ್ದರು.

ಆದರೆ ಇಂದು ಇದ್ದಕ್ಕಿದ್ದಂತೆ ಇನ್ಸ್ಪೆಕ್ಟರ್ ಸೇರಿ ಮೂವರನ್ನು ಕಡಿದು ಗಾಯಗೊಳಿಸಿದ ನಂತರ ನಾಯಿಯನ್ನು ಹಿಡಿಸುವ ಪ್ರಯತ್ನ ನಡೆಸಲಾಯಿತು. ಅಷ್ಟರಲ್ಲಿ ನಾಯಿ ತಾನಾಗಾಗಿಯೇ ಮೃತಪಟ್ಟಿದೆ.

Join Whatsapp
Exit mobile version