ಉಳ್ಳಾಲ: ನಾಪತ್ತೆಯಾಗಿರುವ ಕಾರು ಡೀಲರ್ ಆಗಿರುವ ವ್ಯಕ್ತಿಯ ಚಪ್ಪಲಿ, ಮೊಬೈಲ್ ಮತ್ತು ಕಾರು ಪತ್ತೆಯಾಗಿರುವ ಘಟನೆ ಸೋಮೇಶ್ವರ ಸಮುದ್ರ ತೀರದ ರುದ್ರಪಾದೆಯಲ್ಲಿ ನಡೆದಿದೆ.
ಉಳ್ಳಾಲದ ಧರ್ಮನಗರ ನಿವಾಸಿ ಜಿನ್ನಪ್ಪ ಪೂಜಾರಿ ಎಂಬವರ ಪುತ್ರ ವಸಂತ್ ಅಮೀನ್ (49) ನಾಪತ್ತೆಯಾದವರು.
ಇಂದು ಬೆಳಿಗ್ಗೆ ಮನೆಯಿಂದ ಪತ್ನಿಯಲ್ಲಿ ತಿಳಿಸಿ ಕೆಲಸಕ್ಕೆಂದು ಹೋದವರು ನಾಪತ್ತೆಯಾಗಿದ್ದಾರೆ. ಸ್ಥಳೀಯರು ಸೋಮೇಶ್ವರ ಸಮುದ್ರ ತೀರದಲ್ಲಿ ಕಾರು ಹಾಗೂ ರುದ್ರಪಾದೆಯಲ್ಲಿ ಪಸ್೯ ,ಚಪ್ಪಲಿ ಹಾಗೂ ಮೊಬೈಲ್ ಅನ್ನು ಪತ್ತೆಹಚ್ಚಿದ್ದಾರೆ. ಸ್ಥಳೀಯ ಈಜುಗಾರರ ಸಹಾಯದಿಂದ ಸಮುದ್ರದಲ್ಲಿ ವಸಂತ್ ಅಮೀನ್ ಅವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.