ಭದ್ರಾವತಿ: SDPI ಪಕ್ಷದ 16ನೇ ಸಂಸ್ಥಾಪನಾ ದಿನಾಚರಣೆ

Prasthutha|

ಭದ್ರಾವತಿ: SDPI ಪಕ್ಷದ 16ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಮುಖ್ಯ ರಸ್ತೆಯ ಅನ್ವರ್ ಕಾಲೋನಿಯಲ್ಲಿ ಧ್ವಜಾರೋಹನ ಮತ್ತು ಸನ್ಮಾನ‌ ಕಾರ್ಯಕ್ರಮ ನಡೆಯಿತು.

- Advertisement -

ಈ ಕಾರ್ಯಕ್ರಮದ ಅಧ್ಯಕ್ಷತೆ ಭದ್ರಾವತಿ ತಾಲ್ಲೂಕು ಅಧ್ಯಕ್ಷರಾದ ಮುಹಮ್ಮದ್ ಗೌಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಇಮ್ರಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಫೀಜಿಯಾ ಮಸ್ಜಿದ್ ಅಧ್ಯಕ್ಷ ನಾಸಿರ್ ಖಾನ್, ಸ್ಥಳೀಯ ಮುಖಂಡ ರಿಯಾಝ್ ಅಹಮದ್ ಖಾನ್, ಜಿಲ್ಲಾ ಉಪಾಧ್ಯಕ್ಷ ದೇವೇಂದ್ರ ಪಾಟಿಲ್, ಮಾಜಿ ತಾಲ್ಲೂಕು ಅಧ್ಯಕ್ಷ ಮುಹಮ್ಮದ್ ತಾಹಿರ್ ವೇದಿಕೆಯಲ್ಲಿ ಆಸೀನರಾಗಿದ್ದರು.

ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷರಿಗೆ, ಸ್ಥಳೀಯ ಮುಖಂಡರಿಗೆ ಮತ್ತು ನಗರಸಭೆಯ ಪೌರಕಾರ್ಮಿಕರಿಗೆ ಭದ್ರಾವತಿ ತಾಲ್ಲೂಕು ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು.

Join Whatsapp
Exit mobile version