Home ಟಾಪ್ ಸುದ್ದಿಗಳು ಕೊಚ್ಚಿ | ವಿಮಾನಕ್ಕೆ ಬಾಂಬ್ ಬೆದರಿಕೆ: ಆರೋಪಿ ಪೊಲೀಸರ ವಶಕ್ಕೆ

ಕೊಚ್ಚಿ | ವಿಮಾನಕ್ಕೆ ಬಾಂಬ್ ಬೆದರಿಕೆ: ಆರೋಪಿ ಪೊಲೀಸರ ವಶಕ್ಕೆ

ಕೊಚ್ಚಿ: ಕೇರಳದ ಕೊಚ್ಚಿಯಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ ಹಾಕಿದ್ದ ಆರೋಪಿ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೇರಳದ ಮಲಪ್ಪುರಂ ಜಿಲ್ಲೆಯ ಸುಹೈಬ್‌(29) ಬಂಧಿತ ಆರೊಪಿ. ಆತ ಅದೇ ವಿಮಾನದಲ್ಲಿ ಲಂಡನ್‌ಗೆ ತೆರಳಲು ಟಿಕೆಟ್‌ ಬುಕ್‌ ಮಾಡಿದ್ದನು.

ಬೆಳಿಗ್ಗೆ 11.50ಕ್ಕೆ ಹೊರಡಬೇಕಿದ್ದ ಎಐ149 ವಿಮಾನ ಟೇಕಾಫ್ ಆಗುವ ಸ್ವಲ್ಪ ಮೊದಲು ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿತ್ತು. ಬಳಿಕ ವಿಮಾನವನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿತ್ತು. ವಿಮಾನದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಇದೊಂದು ಹುಸಿ ಬಾಂಬ್‌ ಕರೆ ಎಂದು ತೀರ್ಮಾನಕ್ಕೆ ಬರಲಾಯಿತು. ಅಂತಿಮವಾಗಿ ವಿಮಾನ ಮಧ್ಯಾಹ್ನ 1.25ಕ್ಕೆ ಟೇಕಾಫ್‌ ಆಯಿತು.

Join Whatsapp
Exit mobile version