ರಾಮಮಂದಿರದ ಮೇಲ್ಛಾವಣಿ ಸೋರಿಕೆ: ನಿರಾಕರಿಸಿದ ನಿರ್ಮಾಣ ಸಮಿತಿ

Prasthutha|

ನವದೆಹಲಿ: ರಾಮಮಂದಿರದ ಗರ್ಭಗುಡಿಯಿಂದ ಮಳೆ ನೀರು ಹೊರಹೋಗುತ್ತಿದೆ ಎಂಬ ದೇವಾಲಯದ ಮುಖ್ಯ ಅರ್ಚಕರ ಹೇಳಿಕೆಯನ್ನು ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ನಿರಾಕರಿಸಿದ್ದಾರೆ.

- Advertisement -

ನೀರು ಸೋರಿಕೆಯಾಗಿಲ್ಲ. ಆದರೆ ವಿದ್ಯುತ್ ತಂತಿಗಳನ್ನು ಅಳವಡಿಸಲು ಅಳವಡಿಸಲಾದ ಪೈಪ್’ಗಳಿಂದ ಮಳೆ ನೀರು ಕೆಳಗೆ ಬಂದಿದೆ ಎಂದು ಮಿಶ್ರಾ ಹೇಳಿದ್ದಾರೆ.

ದೇವಾಲಯದ ನಿರ್ಮಾಣದಲ್ಲಿ ನಿರ್ಲಕ್ಷ್ಯವಿದೆ ಎಂದು ರಾಮಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದರು. ಶನಿವಾರ ಮಧ್ಯರಾತ್ರಿಯ ಮಳೆಯ ನಂತರ ದೇವಾಲಯದ ಆವರಣದಿಂದ ಮಳೆ ನೀರನ್ನು ಹೊರಹಾಕಲು ಯಾವುದೇ ವ್ಯವಸ್ಥೆ ಇಲ್ಲ ಎಂದು ಹೇಳಿದ್ದರು.

Join Whatsapp
Exit mobile version