ಘಟಪ್ರಭಾ ನದಿಯಲ್ಲಿ ಮುಗುಚಿಬಿದ್ದ ಟ್ರ್ಯಾಕ್ಟರ್: ಓರ್ವ ನಾಪತ್ತೆ

Prasthutha|

ಬೆಳಗಾವಿ: ಮೂಡಲಗಿ ತಾಲೂಕಿನ ಅವರಾದಿ ನಂದಗಾಂವ್ ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ದಾಟುವಾಗ 13 ಜನರಿದ್ದ ಟ್ರ್ಯಾಕ್ಟರ್ ಘಟಪ್ರಭಾ ನದಿಯಲ್ಲಿ ಮುಗುಚಿಬಿದ್ದ ದುರಂತ ಘಟನೆ ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 12 ಜನರು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಆದರೆ ಓರ್ವ ನದಿಗೆ ಬಿದ್ದು ಕಾಣೆಯಾಗಿದ್ದಾರೆ.

- Advertisement -

ಅವರಾದಿಯಿಂದ ನಂದಗಾಂವ್‌ಗೆ ಕೂಲಿ ಕೆಲಸಕ್ಕೆಂದು‌ ಟ್ರ್ಯಾಕ್ಟರ್‌ನಲ್ಲಿ ಜನರು ತೆರಳಿದ್ದರು. ತುಂಬಿ ಹರಿಯುತ್ತಿದ್ದ ನದಿಯಲ್ಲಿ ಅಪಾಯದ ನಡುವೆಯೂ ಚಾಲಕ ಟ್ರಾಕ್ಟರ್‌ ಇಳಿಸಿದ್ದಾರೆ. ನದಿಯ ಮಧ್ಯೆಕ್ಕೆ ಹೋಗುತ್ತಿದ್ದಂತೆ ಟ್ರಾಲಿ ಸಮೇತ ಟ್ರ್ಯಾಕ್ಟರ್ ನೀರಿಗೆ ಬಿದ್ದಿದೆ.

ಕಾಣೆಯಾದ ವ್ಯಕ್ತಿ ನದಿಯಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಲಗೋಡ ಪೊಲೀಸರು ಕಣ್ಮರೆಯಾದ ವ್ಯಕ್ತಿಗೆ ಶೋಧಕಾರ್ಯ ಮುಂದುವರೆಸಿದ್ದಾರೆ.

Join Whatsapp
Exit mobile version