ಮೋದಿ ಸಂಪುಟದಲ್ಲಿ ಮಂತ್ರಿಯಾಗುತ್ತಿರುವುದು ಸಂತಸ ತಂದಿದೆ: ಕುಮಾರಸ್ವಾಮಿ

Prasthutha|

ನವದೆಹಲಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗುತ್ತಿದ್ದಾರೆ.ಇಂದೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಕುಮರಸ್ವಾಮಿ, ಮೋದಿ ಸಂಪುಟದಲ್ಲಿ ಮಂತ್ರಿಯಾಗುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.

- Advertisement -

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನು ಯಾವುದೇ ಖಾತೆ ನೀಡಬೇಕು ಎಂದು ಒತ್ತಡ ಹಾಕಿಲ್ಲ. ಯಾವ ಖಾತೆ ನೀಡಬೇಕು ಎಂಬುದು ಮೋದಿಯವರಿಗೆ ಬಿಟ್ಟ ನಿರ್ಧಾರ. ಅವರಿಗೆ ನನಗಿಂತ ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ಅವರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದಿದ್ದಾರೆ.

ಕೃಷಿ ಖಾತೆ ಕೊಟ್ಟರೆ ಬಹಳ ಸಂತೋಷ ಪಡಯತ್ತೇನೆ. ಸಕ್ಕರೆ ಖಾತೆಯೂ ಒಳ್ಳೆಯ ಖಾತೆ. ಆದರೆ ನಾನು ಇಂತಹದ್ದೇ ಖಾತೆ ಬೇಕು ಎಂದು ಹೇಳಿಲ್ಲ. ಜನರ ಮಧ್ಯೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂಬುದಷ್ಟೇ ನನ್ನ ಒಲವು ಎಂದಿದ್ದಾರೆ.

- Advertisement -

ಕಳೆದ ಬಾರಿ ಪ್ರಹ್ಲಾದ್ ಜೋಶಿ ಸಚಿವರಾಗಿದ್ದರು. ರಾಜ್ಯವನ್ನು ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್ ಕೂಡ ಕೇಂದ್ರ ಸಚಿವರಾಗಿದ್ದರು. ಈ ಬಾರಿ ಇಬ್ಬರಿಗೂ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ಇವರೊಂದಿಗೆ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಮಾಜಿ ಸಚಿವ ಗೋವಿಂದ ಕಾರಜೋಳ ಅವರಿಗೆ ಸಚಿವ ಸ್ಥಾನ ನಡೆಸಿರುವ ನಿರೀಕ್ಷೆ ಇದೆ.

Join Whatsapp
Exit mobile version