Home ಟಾಪ್ ಸುದ್ದಿಗಳು ರಷ್ಯಾ–ಉಕ್ರೇನ್ ಯುದ್ಧ ನಿಲ್ಲಿಸಿದ ಮೋದಿಗೆ ಪೇಪರ್ ಲೀಕ್ ತಡೆಯಲಾಗಲಿಲ್ಲ: ರಾಹುಲ್ ಗಾಂಧಿ

ರಷ್ಯಾ–ಉಕ್ರೇನ್ ಯುದ್ಧ ನಿಲ್ಲಿಸಿದ ಮೋದಿಗೆ ಪೇಪರ್ ಲೀಕ್ ತಡೆಯಲಾಗಲಿಲ್ಲ: ರಾಹುಲ್ ಗಾಂಧಿ

ನವದೆಹಲಿ: ರಷ್ಯಾ–ಉಕ್ರೇನ್ ಯುದ್ಧ ತಡೆದವರಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ನೀಟ್ ಪರೀಕ್ಷೆ ಅಕ್ರಮ ಮತ್ತು ಯುಜಿಸಿ–ನೆಟ್ ಪರೀಕ್ಷೆ ರದ್ದಾಗಿರುವುದರ ಕುರಿತಂತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
‘ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ–ಉಕ್ರೇನ್ ಮತ್ತು ಇಸ್ರೇಲ್–ಗಾಜಾ ಯುದ್ಧವನ್ನು ನಿಲ್ಲಿಸಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಅವರಿಗೆ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಾಗಲಿಲ್ಲ ಅಥವಾ ಅವರು ಇಚ್ಛಿಸಲಿಲ್ಲವೇನೊ’ ಎಂದು ಲೇವಡಿ ಮಾಡಿದರು.


‘ಚುನಾವಣೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮಾನಸಿಕವಾಗಿ ಕುಸಿದಿದ್ದು, ಸರ್ಕಾರ ನಡೆಸಲು ಹೆಣಗಾಡುತ್ತಿದ್ದಾರೆ’ ಎಂದರು.

Join Whatsapp
Exit mobile version