Home ಕ್ರೀಡೆ ಶ್ರೀಲಂಕಾ ಪ್ರವಾಸ: ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಆಗಿ ಸಾಯಿರಾಜ್ ಬಹುತುಳೆ

ಶ್ರೀಲಂಕಾ ಪ್ರವಾಸ: ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಆಗಿ ಸಾಯಿರಾಜ್ ಬಹುತುಳೆ

ಮುಂಬೈ : ಆರು ಪಂದ್ಯಗಳ ಬಿಳಿ ಚೆಂಡಿನ ಕ್ರಿಕೆಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಮಾಜಿ ಲೆಗ್ ಸ್ಪಿನ್ನಿಂಗ್ ಆಲ್ರೌಂಡರ್ ಸಾಯಿರಾಜ್ ಬಹುತುಳೆ ಶ್ರೀಲಂಕಾಕ್ಕೆ ಪ್ರಯಾಣಿಸಲಿದ್ದಾರೆ.

ಭಾರತ ಮತ್ತು ಮುಂಬೈ ತಂಡದ ಮಾಜಿ ಲೆಗ್ ಸ್ಪಿನ್ನಿಂಗ್ ಆಲ್ರೌಂಡರ್ ಸಾಯಿರಾಜ್ ಬಹುತುಳೆ ನಿರ್ಗಮನ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಮತ್ತು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ವಿ.ವಿ.ಎಸ್. ಲಕ್ಷ್ಮಣ್ ಅಡಿಯಲ್ಲಿ ಭಾರತ ಎ ಮತ್ತು ಭಾರತ ಹಿರಿಯರ ತಂಡದಲ್ಲಿ ಸಹಾಯಕರಾಗಿದ್ದರು.

ಬಹುತುಳೆ 1997-2003ರ ಅವಧಿಯಲ್ಲಿ ಭಾರತದ ಪರವಾಗಿ ಎರಡು ಟೆಸ್ಟ್‌ ಮತ್ತು ಎಂಟು ಏಕದಿನ ಪಂದ್ಯಗಳನ್ನು ಆಡಿದ್ದಾರೆ. 188 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ ಅವರು 26ರ ಸರಾಸರಿಯಲ್ಲಿ 630 ವಿಕೆಟ್‌ ಮತ್ತು 31.83ರ ಸರಾಸರಿಯಲ್ಲಿ 6176 ರನ್ ಮಾಡಿದ್ದಾರೆ.

ಬಹುತುಳೆಯವರ ಉಪಸ್ಥಿತಿಯು ಮುಖ್ಯವಾಗಿ ಭಾರತೀಯ ಸ್ಪಿನ್ನರ್ಗಳಾದ ಅಕ್ಷರ್ ಪಟೇಲ್, ರವಿ ಬಿಷ್ಣೋಯ್ ಮತ್ತು ವಾಶಿಂಗ್ಟನ್ ಸುಂದರ್ಗೆ ನೆರವಾಗಲಿದೆ ಎಂದು ಆಶಿಸಲಾಗಿದೆ.

ಕಳೆದ ವರ್ಷ ಶ್ರೀಲಂಕಾ ವಿರುದ್ಧದ ದೇಶಿ ಸರಣಿಯಲ್ಲೂ ಭಾರತೀಯ ತಂಡದೊಂದಿಗೆ ಇದ್ದ ಬಹತುಳೆ, 2017ರಲ್ಲಿ ಅವರು ಕ್ರಿಕೆಟ್ ಆಸ್ಟ್ರೇಲಿಯದ ಸೆಂಟರ್ ಅಫ್ ಎಕ್ಸಲೆನ್ಸ್ನಲ್ಲಿ ಆಸ್ಟ್ರೇಲಿಯದ ಯುವ ಸ್ಪಿನ್ನರ್ಗಳಿಗೆ ತರಬೇತಿ ನೀಡಿದ್ದರು.

Join Whatsapp
Exit mobile version