Home Uncategorized ಯುಎಇ ಮಧ್ಯಸ್ಥಿಕೆ: ರಶ್ಯ-ಉಕ್ರೇನ್ ದೇಶಗಳ ತಲಾ 103 ಯುದ್ಧಕೈದಿಗಳ ವಿನಿಮಯ

ಯುಎಇ ಮಧ್ಯಸ್ಥಿಕೆ: ರಶ್ಯ-ಉಕ್ರೇನ್ ದೇಶಗಳ ತಲಾ 103 ಯುದ್ಧಕೈದಿಗಳ ವಿನಿಮಯ

ಕೀವ್ : ಯುಎಇ ಮಧ್ಯಸ್ಥಿಕೆಯಲ್ಲಿ ನಡೆದ ಮಹತ್ವದ ಕೈದಿಗಳ ವಿನಿಮಯ ಒಪ್ಪಂದದಡಿ ರಶ್ಯ ಹಾಗೂ ಉಕ್ರೇನ್ ದೇಶಗಳು ಶನಿವಾರ ತಲಾ 103 ಯುದ್ಧಕೈದಿಗಳನ್ನು ವಿನಿಮಯ ಮಾಡಿಕೊಂಡಿವೆ. ಶನಿವಾರ ಬಿಡುಗಡೆಯಾದ ರಶ್ಯನ್ ಯೋಧರೆಲ್ಲರೂ ಗಡಿಪ್ರದೇಶವಾದ ಕರ್ಸ್ಕ್ ಪ್ರಾಂತಕ್ಕೆ ಸೇರಿದವರೆಂದು ಇಂಟರ್‌ಫ್ಯಾಕ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಬಿಡುಗಡೆಗೊಂಡ ಎಲ್ಲಾ ರಶ್ಯನ್ ಯೋಧರು ಬೆಲಾರಸ್ ಗಣರಾಜ್ಯದ ಪ್ರಾಂತವೊಂದರಲ್ಲಿದ್ದು, ಅಲ್ಲಿ ಅವರಿಗೆ ಸೂಕ್ತ ಮಾನಸಿಕ ಹಾಗೂ ವೈದ್ಯಕೀಯ ನೆರವನ್ನು ಒದಗಿಸಲಾಗುತ್ತಿದೆ ಮತ್ತು ಅವರಿಗೆ ಸಂಬಂಧಿಕರನ್ನು ಭೇಟಿಯಾಗಲು ಅವಕಾಶ ನೀಡಲಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯವು ಟೆಲಿಗ್ರಾಂ ಜಾಲತಾಣದಲ್ಲಿ ತಿಳಿಸಿದೆ.

Join Whatsapp
Exit mobile version