Home ಟಾಪ್ ಸುದ್ದಿಗಳು ಅಮೆರಿಕ: ಕ್ಷುಲ್ಲಕ ಜಗಳದಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ

ಅಮೆರಿಕ: ಕ್ಷುಲ್ಲಕ ಜಗಳದಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ

ವಾಷಿಂಗ್ಟನ್‌: ಎರಡು ವಾರಗಳ ಹಿಂದೆಯಷ್ಟೇ ಮದುವೆಯಾಗಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಕ್ಷುಲ್ಲಕ ಕಾರಣಕ್ಕಾಗಿ ಗುಂಡಿಕ್ಕಿ ಕೊಲೆಗೈದ ಘಟನೆ ಅಮೆರಿಕದ ಇಂಡಿಯಾನಾದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಗ್ರಾ ಮೂಲದ ಗವಿನ್‌ ದಸೌರ್‌ (29) ಮೃತ ವ್ಯಕ್ತಿ. ಜೂ.29ರಂದು ಮೆಕ್ಸಿಕನ್‌ ಯುವತಿ ವಿವಿಯಾನಾ ಜಾಮೋರಾ ಜೊತೆ ಅವರ ವಿವಾಹ ನಡೆದಿತ್ತು.

ದಂಪತಿ ಮನೆಗೆ ಮರಳುತ್ತಿರುವಾಗ ರಸ್ತೆಯಲ್ಲಿ ಮತ್ತೊಂದು ವಾಹನದ ಚಾಲಕನ ಜೊತೆ ನಡೆದ ಸಣ್ಣ ಜಗಳದಲ್ಲಿ ಗವಿನ್ ದಸೌರ್‌ಗೆ ಆ ವಾಹನದೊಳಗಿರುವ ವ್ಯಕ್ತಿ ಗುಂಡಿಕ್ಕಿದ್ದಾನೆ. ಗಂಭೀರವಾಗಿ ಗಾಯಗೊಂಡ ಗವಿನ್‌ರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಅರೆಸ್ಟ್‌ ಮಾಡಿದ್ದು,ತನಿಖೆ ಮುಂದುವರೆದಿದೆ. ಗವಿನ್‌ ಕೈಯಲ್ಲೂ ಗನ್‌ ಇದ್ದ ಕಾರಣ ತನ್ನ ಜೀವ ರಕ್ಷಣೆಗಾಗಿ ಗುಂಡು ಹಾರಿಸಿದ್ದೇನೆ ಎಂದು ಆರೋಪಿ ಹೇಳಿದ್ದಾಗಿ ವರದಿಯಾಗಿದೆ.

https://twitter.com/i/status/1814057754572829162
Join Whatsapp
Exit mobile version