ಗಾಝಾದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ: ಕನಿಷ್ಠ 40 ಮಂದಿ ಮೃತ್ಯು

Prasthutha|

ಗಾಝಾ: ಇಲ್ಲಿನ ಅಲ್‌-ಮಾವಾಸಿ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ್ದು, ಕನಿಷ್ಠ 40 ಜನರು ಮೃತಪಟ್ಟು, 60 ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನ್ ಡಬ್ಲ್ಯೂಎಎಫ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.

- Advertisement -

ಇಸ್ರೇಲ್ ಮಿಲಿಟರಿಯು ಜನನಿಬಿಡ ಪ್ರದೇಶವೆಂದು ಗೊತ್ತುಪಡಿಸಿದ ಖಾನ್ ಯೂನಿಸ್‌ನ ಪಶ್ಚಿಮಕ್ಕೆ ಇರುವ ಮಾವಾಸಿ ಮೇಲೆ ದಾಳಿ ಮಾಡಲಾಗಿದೆ.

ಈ ಪ್ರದೇಶವು ಇಸ್ರೇಲ್-ಹಮಾಸ್ ಯುದ್ಧದಿಂದ ಸ್ಥಳಾಂತರಗೊಂಡ ಅನೇಕ ಪ್ಯಾಲೆಸ್ತೇನಿಯರಿಗೆ ನೆಲೆಯಾಗಿದೆ.

- Advertisement -

ಯುದ್ಧ ಪ್ರಾರಂಭವಾದಾಗಿನಿಂದ ಗಾಝಾದಲ್ಲಿ 40,000 ಪ್ಯಾಲೇಸ್ತೆನಿಯರು ಹತರಾಗಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ಹೇಳಿದೆ.

ಗಾಝಾದ 2.3 ಮಿಲಿಯನ್ ಜನಸಂಖ್ಯೆಯ ಸುಮಾರು ಶೇಕಡ 90ರಷ್ಟು ಜನರನ್ನು ಆಗಾಗೆ ಸ್ಥಳಾಂತರ ಮಾಡಲಾಗಿದೆ.



Join Whatsapp
Exit mobile version