ಅಮೆರಿಕ ಚುನಾವಣೆಯಲ್ಲಿ ಬಾಹ್ಯಾಕಾಶದಿಂದಲೇ ಮತ ಚಲಾಯಿಸಲಿದ್ದಾರೆ ಸುನೀತಾ ವಿಲಿಯಮ್ಸ್..!

Prasthutha|

ಸುನಿತಾ ವಿಲಿಯಮ್ಸ್ ಹಾಗೂ ಬಚ್ ವಿಲ್ ಮೋರ್ ಅವರು ಭೂಮಿಗೆ ಮರಳುವುದು ತಡವಾಗಲಿದ್ದು, 2025ರ ಫೆಬ್ರವರಿ ಅಂತ್ಯದ ವೇಳೆಗೆ ಅವರು ಹಿಂದಿರುಗಲಿದ್ದಾರೆ ಎಂದು ಈಗಾಗಲೇ ‘ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ’(ನಾಸಾ) ಸ್ಪಷ್ಟಪಡಿಸಿದೆ.

- Advertisement -


ಇದರಿಂದ ಇವರಿಬ್ಬರು ಇದೇ ನವೆಂಬರ್ 5ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನದ ಹಕ್ಕು ಕಳೆದುಕೊಳ್ಳಲಿದ್ದರು. ಆದರೆ, ಇದೀಗ ಬಾಹ್ಯಾಕಾಶದಿಂದಲೇ ಮತ ಚಲಾವಣೆ ಮಾಡಲು ತೀರ್ಮಾನಿಸಿದ್ದಾರೆ.


“ನಾಗರೀಕರಾಗಿ ಮತ ಚಲಾಯಿಸುವುದು ಬಹಳ ಮುಖ್ಯ ಕರ್ತವ್ಯ. ನಾನು ಬಾಹ್ಯಾಕಾಶದಿಂದಲೇ ಮತ ಚಲಾಯಿಸುವುದನ್ನು ಎದುರು ನೋಡುತ್ತಿದ್ದೇನೆ,” ಎಂದು ಎಂದು ಸುನೀತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದಲೇ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

- Advertisement -

ಇದೇ ವೇಳೆ ಬಚ್ ವಿಲ್ಮೋರ್, “ಬ್ಯಾಲೆಟ್ಗಾಗಿ ನಾನು ಇಂದೇ ನನ್ನ ಮನವಿ ಸಲ್ಲಿಸಿದ್ದೇನೆ,” ಎಂದು ಹೇಳಿದ್ದಾರೆ.


ಹೇಗೆ ನಡೆಯುತ್ತದೆ ಈ ಪ್ರಕ್ರಿಯೆ?

ಮತದಾದನ ದಿನಕ್ಕೂ ಮುನ್ನ ಜೆಎಸ್ ಸಿಯ ಮಿಷನ್ ಕಂಟ್ರೋಲ್ ಮೂಲಕ ಗಗನಯಾತ್ರಿಗಳಿಗೆ ಎನ್ ಕ್ರಿಪ್ಟ್ ಮಾಡಲಾದ ಎಲೆಕ್ಟ್ರಾನಿಕ್ ಮತಯಂತ್ರವನ್ನು ಅಪ್ ಲಿಂಕ್ ಮಾಡಲಾಗುತ್ತದೆ. ಇಮೇಲ್ ಮೂಲಕ ಕಳುಹಿಸಲಾದ ವಿಶಿಷ್ಟ ಕ್ರೆಡೆನ್ಶಿಯಲ್ ಸೆಟ್ ಅನ್ನು ಬಳಸಿಕೊಂಡು ಗಗನಯಾತ್ರಿಗಳು ತಮ್ಮ ಮತಪತ್ರಗಳಿಗೆ ಪ್ರವೇಶಿಸಬಹುದು. ಹಾಗೂ ತಮ್ಮ ಮತಗಳನ್ನು ಚಲಾಯಿಸಬಹುದು. ನಂತರ ಇದನ್ನು ಡೌನ್ ಲಿಂಕ್ ಮಾಡಿ ಭೂಮಿಯಲ್ಲಿರುವ ಕೌಂಟಿ ಕ್ಲರ್ಕ್ ನ ಕಚೇರಿಗೆ ಕಳುಹಿಸಬಹುದು,” ಎಂದು ನ್ಯಾಷನಲ್ ಏರ್ ಆಂಡ್ ಸ್ಪೇಸ್ ಮ್ಯೂಸಿಯಂ ವೆಬ್ ಸೈಟ್ ನಲ್ಲಿ ವಿವರಿಸಲಾಗಿದೆ.



Join Whatsapp
Exit mobile version