Home ಟಾಪ್ ಸುದ್ದಿಗಳು ಕೊಪ್ಪಳ: ಆಹಾರ ಪಾರ್ಸಲ್​ ಬದಲಿಗೆ 50 ಸಾವಿರ ರೂ. ಹಣವಿದ್ದ ಕವರ್​ ನೀಡಿದ ಹೋಟೆಲ್ ಮಾಲಿಕ

ಕೊಪ್ಪಳ: ಆಹಾರ ಪಾರ್ಸಲ್​ ಬದಲಿಗೆ 50 ಸಾವಿರ ರೂ. ಹಣವಿದ್ದ ಕವರ್​ ನೀಡಿದ ಹೋಟೆಲ್ ಮಾಲಿಕ

ಕೊಪ್ಪಳ: ಗ್ರಾಹಕನಿಗೆ ಆಹಾರ ಪಾರ್ಸಲ್​ ಕವರ್​ ನೀಡುವ ಬದಲಿಗೆ ಹೋಟೆಲ್ ಮಾಲಿಕ 50 ಸಾವಿರ ರೂ. ಹಣವಿದ್ದ ಕವರ್​ ನೀಡಿದ ಘಟನೆ ನಡೆದಿದ್ದು, ಗ್ರಾಹಕ ಪಾರ್ಸಲ್​ ತೆಗೆದುಕೊಂಡು ಹೋಗಿ ಮನೆಯಲ್ಲಿ ನೋಡಿದಾಗ ತಿಂಡಿ ಬದಲಿಗೆ 50 ಸಾವಿರ ರೂ. ಇರುವುದು ಕಂಡಿದೆ.

ರಸೂಲ್ ಸಾಬ ಸೌದಾಗರ್ ಎಂಬುವರು ಕುಷ್ಟಗಿ ಪಟ್ಟಣದಲ್ಲಿ ಪುಟ್ಟ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಶನಿವಾರ ಅವರು ಬ್ಯಾಂಕ್​ಗೆ ಕಟ್ಟಲು ಎಂದು ಮನೆಯಿಂದ 49,625 ರೂಪಾಯಿ ಇದ್ದ ಹಣದ ಕವರ್​ನ್ನು ಹೋಟೆಲ್ ನಲ್ಲಿಟ್ಟಿದ್ದರು.

ಮುಂಜಾನೆ ಕುಷ್ಟಗಿ ಪಟ್ಟಣದ ನಿವಾಸಿಯಾಗಿರುವ ಸರ್ಕಾರಿ ಶಾಲೆ ಶಿಕ್ಷಕ ಶ್ರೀನಿವಾಸ್ ದೇಸಾಯಿ, ಸೌದಾಗರ್ ಹೋಟೆಲ್​ಗೆ ಬಂದಿದ್ದರು. ತನಗೆ ಇಡ್ಲಿ, ವಡೆ, ದೋಸೆಯನ್ನು ಪಾರ್ಸಲ್ ಕೊಡಿ ಅಂತ ಹೇಳಿದ್ದರು. ಆದರೆ ಸೌದಾಗರ್ ಆಹಾರವಿದ್ದ ಕವರ್ ನೀಡುವ ಬದಲು ಹಣವಿದ್ದ ಕವರ್ ನೀಡಿ, ನಿಮ್ಮ ಪಾರ್ಸಲ್ ತೆಗೆದುಕೊಂಡು ಹೋಗಿ ಅಂತ ಹೇಳಿದ್ದರು. ಹೀಗಾಗಿ ಶ್ರೀನಿವಾಸ ದೇಸಾಯಿ ಅವರು ಕವರ್​​ ಅನ್ನು ಮನೆಗೆ ತೆಗೆದುಕೊಂಡು ಹೋಗಿದ್ದರು. ಆದರೆ ಆ ಹಣವನ್ನು ಹೋಟೆಲ್​ ಮಾಲಿಕನಿಗೆ ಗ್ರಾಹಕ ​ ಶಿಕ್ಷಕ ಮರಳಿಸಿದ್ದಾರೆ.

Join Whatsapp
Exit mobile version