Home ಟಾಪ್ ಸುದ್ದಿಗಳು ಅತಿ ವೇಗದಿಂದ ಬಂದು ಗುದ್ದಿದ ಕಾರು: ಬೈಕ್‌ನಿಂದ ಹಾರಿ ರಸ್ತೆಯ ಮೇಲೆ ಬಿದ್ದ ದಂಪತಿ

ಅತಿ ವೇಗದಿಂದ ಬಂದು ಗುದ್ದಿದ ಕಾರು: ಬೈಕ್‌ನಿಂದ ಹಾರಿ ರಸ್ತೆಯ ಮೇಲೆ ಬಿದ್ದ ದಂಪತಿ

ಪುಣೆ: ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ದಂಪತಿ ಹಾರಿ ರಸ್ತೆಯ ಮೇಲೆ ಬಿದ್ದ ಘಟನೆ ಪುಣೆಯ ಅಹ್ಮದ್ ನಗರ-ಕಲ್ಯಾಣ್ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯ ವೀಡಿಯೊ ವೈರಲ್ ಆಗಿದೆ

ಗಂಭೀರ ಗಾಯಗೊಂಡ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವೇಗವಾಗಿ ಬಂದ ಕಾರು ದಂಪತಿ ಹೋಗುತ್ತಿದ್ದ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ನಂತರ ಅವರು ಮೇಲೆ ಹಾರಿ ಹೋಗಿ ನೆಲಕ್ಕೆ ಅಪ್ಪಳಿಸಿ ಬಿದ್ದಿದ್ದಾರೆ. ಪುಣೆ ಜಿಲ್ಲೆಯ ಜುನ್ನಾರ್ ತಾಲ್ಲೂಕಿನ ಪಿಂಪ್ರಿ ಪೆಂಧರ್ ಗ್ರಾಮದ ಬಳಿ ಗುರುವಾರ ಈ ಘಟನೆ ನಡೆದಿದೆ. ದಂಪತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಅಲ್ಲದೆ, ಕಾರಿನ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Join Whatsapp
Exit mobile version