Home ಟಾಪ್ ಸುದ್ದಿಗಳು ಉಡುಪಿ ಯೂತ್ ಕಾಂಗ್ರೆಸ್ ಚುನಾವಣೆ: ಬಿಜೆಪಿ ಬೆಂಬಲ ಕೋರಿದ್ರಾ ಕಾಂಗ್ರೆಸ್ ಅಭ್ಯರ್ಥಿ?

ಉಡುಪಿ ಯೂತ್ ಕಾಂಗ್ರೆಸ್ ಚುನಾವಣೆ: ಬಿಜೆಪಿ ಬೆಂಬಲ ಕೋರಿದ್ರಾ ಕಾಂಗ್ರೆಸ್ ಅಭ್ಯರ್ಥಿ?

ಉಡುಪಿ: ಪಕ್ಷಕ್ಕಾಗಿ ಹೊಸ ಕಾರ್ಯಕರ್ತರನ್ನು ಜೋಡಿಸುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಚುನಾವಣೆ ನಡೆಯುತ್ತಿದ್ದು, ಅಭ್ಯರ್ಥಿಗಳು ಬೂತ್ ಮಟ್ಟದ ಅಭಿಯಾನ ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಅಭ್ಯರ್ಥಿ ಬಿಜೆಪಿ ಶಾಸಕರ ಹಾಗೂ ಕಾರ್ಯಕರ್ತರ ಬೆಂಬಲ ಕೋರಿದ್ದಾರೆನ್ನಲಾದ ಫೋಟೋಗಳು ಹಾಗೂ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಐದು ಮಂದಿ ನಾಮಪತ್ರ ಸಲ್ಲುಸಿದ್ದು ಪೈಪೋಟಿ ಇದೇ ಎನ್ನಲಾಗಿದೆ. ಚುನಾವಣೆ ಅಂತ್ಯಗೊಳ್ಳಲು ನಾಲ್ಕು ದಿನ ಬಾಕಿ ಇರುವಾಗ ಉಡುಪಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣರನ್ನು ಅವರ ಕಚೇರಿಯಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಭ್ಯರ್ಥಿ ಅರ್ಜುನ್ ನಾಯರಿ ಭೇಟಿಯಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣರನ್ನು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಹಾಗೂ ಎಬಿವಿಪಿ ಕಾರ್ಯಕರ್ತರನ್ನು ಜೊತೆಗೆ ಕರೆದುಕೊಂಡು ಹೋಗಿ ಯುವ ಕಾಂಗ್ರೆಸ್ ಚುನಾವಣೆಗೆ ಬೆಂಬಲ ಕೋರಿದ್ದರೆನ್ನಲಾದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಕಾಂಗ್ರೆಸ್ ಪಾಳಯದಲ್ಲಿ ವಿಪರೀತ ಆಕ್ರೋಶ ಭುಗಿಲೆದ್ದಿದ್ದೆ.

Join Whatsapp
Exit mobile version