ಕಲಬುರಗಿ | ಬೈಕ್ ಗೆ ಬಸ್ ಡಿಕ್ಕಿ: ಮೂವರು ಸಾವು

Prasthutha|

ಕಮಲಾಪುರ: ಬೈಕ್ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಕ್ರಾಸ್ ಬಳಿ ಸಂಭವಿಸಿದೆ.

- Advertisement -

ಕಿಣ್ಣಿ ಸಡಕ್ ಗ್ರಾಮದ ಸಮೀರ್ ಜಮೀರ್ ಸಾಬ್ (22), ವಿಶಾಲ ಸಂಜಯಕುಮಾರ ಜಾಧವ (20) ಮತ್ತು ಚಂದ್ರಕಾಂತ ನಿಂಗಪ್ಪ ಹೊಳಕುಂದಿ (23) ಮೃತ ಯುವಕರು. ಈ ಮೂವರು ಸೇರಿ ಬೈಕ್ ಮೇಲೆ ಕಮಲಾಪುರಕ್ಕೆ ಬರುತ್ತಿದ್ದರು.
ಕಲಬುರಗಿಯಿಂದ ಹುಮನಾಬಾದ್ ಗೆ ತೆರಳುತ್ತಿದ್ದ ವಿಜಯಪುರ-ಬಸವಕಲ್ಯಾಣ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಿಂದ ತೀವ್ರವಾಗಿ ಗಾಯಗೊಂಡು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version