ಮಂಗಳೂರು: ಕಾಂಗ್ರೆಸ್ ಮುಖಂಡನಿಗೆ ಹಲ್ಲೆ ನಡೆಸಿ ಮನೆಯಿಂದ ಕೋಟಿ ರೂ‌‌.ಗೂ ಅಧಿಕ ಮೌಲ್ಯದ ನಗ-ನಗದು ದರೋಡೆ

Prasthutha|

ಮಂಗಳೂರು: ಕಾಂಗ್ರೆಸ್ ಮುಖಂಡ, ಕಂಟ್ರಾಕ್ಟರ್, ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರ ಉಳಾಯಿಬೆಟ್ಟಿನ ಮನೆಯಿಂದ ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ಕಳ್ಳರು ದೋಚಿದ್ದಾರೆ.

- Advertisement -

ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಮಾಸ್ಕ್ ಮತ್ತು ಮುಸುಕು ಹಾಕ್ಕೊಂಡಿದ್ದ 9 ಮಂದಿಯಿದ್ದ ತಂಡ ಈ ಕೃತ್ಯವೆಸಗಿದೆ.

ಮಂಗಳೂರು ನಗರದಿಂದ 22 ಕಿಮೀ ದೂರದ ಉಳಾಯಿಬೆಟ್ಟು ಬಳಿಯ ಪೆರ್ಮಂಕಿ ಪದವಿನಲ್ಲಿ ಪದ್ಮನಾಭ ಕೋಟ್ಯಾನ್ ಮನೆಯಿದೆ‌. ರಾತ್ರಿ 8 ಗಂಟೆ ವೇಳೆಗೆ ಪದ್ಮನಾಭ ಕೋಟ್ಯಾನ್ ತನ್ನ ಮನೆಯಲ್ಲಿ ವಾಕಿಂಗ್ ಮಾಡುತ್ತಿದ್ದಾಗಲೇ ದಾಳಿ ನಡೆಸಲಾಗಿದ್ದು, ಕೋಟ್ಯಾನ್ ಮೇಲೆ ಹಲ್ಲೆ ನಡೆಸಿದ್ದಾರೆ. ನೆಲಕ್ಕೆ ಬಿದ್ದ ಕೋಟ್ಯಾನ್ ಎದೆ, ಹೊಟ್ಟೆಗೆ ತುಳಿದಿದ್ದಾರೆ. ಚೂರಿಯಿಂದ ಕೈ ಮತ್ತು ಕಾಲಿಗೆ ಇರಿದಿದ್ದು, ಹೆದರಿಸಲು ಯತ್ನಿಸಿದ್ದಾರೆ. ಮನೆಯ ಒಳಗಿದ್ದ ಪತ್ನಿ ಶಶಿಪ್ರಭಾ ಕೋಟ್ಯಾನ್ ಮತ್ತು ಮಗ ಪ್ರಥಮ್ ಅವರಿಗೂ ಹಲ್ಲೆ ನಡೆಸಿ ಅವರನ್ನು ಬೆಡ್ ಶೀಟ್ ಬಳಸಿ ಕಂಬಕ್ಕೆ ಚಿನ್ನಾಭರಣಗಳಿದ್ದ ಕಪಾಟಿನ ಕೀಯನ್ನು ಕೇಳಿ ಪಡೆದು ದೋಚಿದ್ದಾರೆ.

- Advertisement -

ಇನ್ನೋವಾ ವಾಹನದಲ್ಲಿ ಬಂದಿದ್ದ, 9 ಮಂದಿಯಿದ್ದ ಆರೋಪಿಗಳು ಹಿಂದಿ ಮಾತನಾಡುತ್ತಿದ್ದರು. ಮನೆಯ ಹೊರಗೆ ನಿಲ್ಲಿಸಿದ್ದ ಫಾರ್ಚುನ‌ರ್ ಕಾರನ್ನೂ ತೆಗೆದುಕೊಂಡು ಹೋದ ಕಳ್ಳರು ಮನೆಯಿಂದ ಅನತಿ ದೂರದಲ್ಲಿ ಕಾರನ್ನು ಬಿಟ್ಟು ಹೋಗಿದ್ದಾರೆ.

ಪದ್ಮನಾಭ ಕೋಟ್ಯಾನ್ ನಿತ್ಯ ಕೊರಳಲ್ಲಿ ದಪ್ಪದ ಸರ ಮತ್ತು ಕೈಯಲ್ಲಿ ದಪ್ಪಗಿನ ಉಂಗುರಗಳನ್ನು ಧರಿಸುತ್ತಿದ್ದರು. ಅವನ್ನು ಕೂಡ ಬಲವಂತದಿಂದ ದರೋಡೆಕೋರರು ಕಿತ್ತುಕೊಂಡಿದ್ದಾರೆ.

ಪದ್ಮನಾಭ ಕೋಟ್ಯಾನ್ ಕಾಂಗ್ರೆಸ್ ಮುಖಂಡರಾಗಿದ್ದು, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು. ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಧಾರ್ಮಿಕ ಪರಿಷತ್ ಸದಸ್ಯರಾಗಿದ್ದರು. ಮಂಗಳೂರಿನಲ್ಲಿ ಕ್ಲಾಸ್ ವನ್ ಪಿಡಬ್ಲ್ಯುಡಿ ಗುತ್ತಿಗೆದಾರನಾಗಿದ್ದು, ಇದರ ಜೊತೆಗೆ ನೀರುಮಾರ್ಗ ಆಸುಪಾಸಿನಲ್ಲಿ ಕಲ್ಲಿನ ಕೋರೆ ನಡೆಸುತ್ತಿದ್ದಾರೆ.

Join Whatsapp
Exit mobile version