ಪತಿ ವಿರುದ್ಧ ವ್ಯವಸ್ಥಿತ ಷಡ್ಯಂತ್ರ, ಇದನ್ನೇ ಸರ್ವಾಧಿಕಾರ ಎನ್ನುವುದು: ಸುನೀತಾ ಕೇಜ್ರಿವಾಲ್

Prasthutha|

ನವದೆಹಲಿ: ಸರ್ಕಾರದ ಇಡೀ ವ್ಯವಸ್ಥೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿನಲ್ಲೇ ಇರುವಂತೆ ನೋಡಿಕೊಳ್ಳಲು ಬಳಕೆಯಾಗುತ್ತಿದೆ. ಇದನ್ನೇ ಸರ್ವಾಧಿಕಾರ ಹಾಗೂ ತುರ್ತು ಪರಿಸ್ಥಿತಿ ಎನ್ನುವುದು ಎಂದು ಕೇಜ್ರಿವಾಲ್ ಪತ್ನಿ ಸುನೀತಾ ಕಿಡಿಗಾರಿದ್ದಾರೆ.

- Advertisement -

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಸಿಬಿಐ ಹೆಚ್ಚಿನ ತನಿಖೆಗಾಗಿ ಐದು ದಿನಗಳ  ಕಾಲ ವಶಕ್ಕೆ ಪಡೆದಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸುನೀತಾ, ತನ್ನ ಪತಿಗೆ ಜೂನ್ 20ರಂದು ಜಾಮೀನು ಮಂಜೂರಾಗಿತ್ತು. ಆದರೆ ಜಾರಿ ನಿರ್ದೇಶನಾಲಯ ಅದಕ್ಕೆ ತಕ್ಷಣವೇ ತಡೆ ತಂದಿತು. ಅದರ ಮರುದಿನವೇ ಅದೇ ಪ್ರಕರಣದಲ್ಲಿ ಸಿಬಿಐ ಆರೋಪ ಹೋರಿಸಿ ಬಂಧಿಸಿದೆ. ಕೇಜ್ರಿವಾಲ್ ಜೈಲಿನಿಂದ ಹೊರಗೆ ಬಾರದಂತೆ ಇಡೀ ವ್ಯವಸ್ಥೆಯೇ ಸಂಚು ರೂಪಿಸಿದರ ಫಲ ಇದು. ಇದು ನಿಜವಾಗಿಯೂ ನ್ಯಾಯವಲ್ಲ. ಇದು ಸರ್ವಾಧಿಕಾರ, ಇದುವೇ ತುರ್ತು ಪರಿಸ್ಥಿತಿಎಂದಿದ್ದಾರೆ.

Join Whatsapp
Exit mobile version