ನೋಯ್ಡಾ | ಕಾರು ಹಿಟ್ ಆ್ಯಂಡ್ ರನ್: ಪಾದಚಾರಿ ಸಾವು

Prasthutha|

ನೋಯ್ಡಾ: ಐಷಾರಾಮಿ ಕಾರೊಂದು ಪಾದಚಾರಿಯ ಸಾವಿಗೆ ಕಾರಣವಾಗಿರುವ ಘಟನೆ ನೋಯ್ಡಾದಲ್ಲಿ ಸಂಭವಿಸಿದೆ.

- Advertisement -

ಭಾನುವಾರ ಬೆಳಿಗ್ಗೆ 6:30 ರ ಸುಮಾರು ನೋಯ್ಡಾ ಹೊರವಲಯದ ಗೌತಮ್ ಬುದ್ಧ ನಗರ ವ್ಯಾಪ್ತಿಯ ರಸ್ತೆಯೊಂದರಲ್ಲಿ ಬಿಳಿ ಬಣ್ಣದ ಔಡಿ ಕಾರೊಂದು ಪಾದಚಾರಿಯೊಬ್ಬರಿಗೆ ಗುದ್ದಿಕೊಂಡು ಹೋಗಿದ್ದರಿಂದ ಪಾದಚಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಮೃತರನ್ನು 54 ವರ್ಷದ ಜಾನಕ್ ದೇವ್ ಎಂದು ಗುರುತಿಸಲಾಗಿದೆ. ಈ ಕುರಿತು ಮೃತನ ಮಗ ಗಿಜ್ಜೋರ್ ಹಳ್ಳಿಯ ಪ್ರದೀಪ್ ಎನ್ನುವರು ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಾರಿನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಮನೀಶ್ ಮಿಶ್ರಾ ತಿಳಿಸಿದ್ದಾರೆ.

- Advertisement -

Join Whatsapp
Exit mobile version