ವಯನಾಡಿನಲ್ಲಿ ಪ್ರಿಯಾಂಕ ಗಾಂಧಿ ಪರ ಪ್ರಚಾರ ಮಾಡಲಿರುವ ಮಮತಾ ಬ್ಯಾನರ್ಜಿ

Prasthutha|

ನವದೆಹಲಿ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬಣದ ಜೊತೆ ಕೈಜೋಡಿಸಿದ್ದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ರಾಹುಲ್ ಗಾಂಧಿಯಿಂದ ತೆರವಾಗಿರುವ ವಯನಾಡು ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಗಾಂಧಿ ವಾದ್ರಾ ಪರ ಮಾಡಲಿದ್ದಾರೆ ಎನ್ನಲಾಗಿದೆ.

- Advertisement -

ವಯನಾಡಿನಿಂದ ಚುನಾವಣಾ ಕಣಕ್ಕೆ ಧುಮುಕಲಿರುವ ಪ್ರಿಯಾಂಕ ಗಾಂಧಿ ಪರವಾಗಿ ಪ್ರಚಾರಕ್ಕೆ ಬರುವಂತೆ ಮಮತಾ ಬ್ಯಾನರ್ಜಿಗೆ ಕಾಂಗ್ರೆಸ್ ಮನವಿ ಮಾಡಿತ್ತು. ಕಾಂಗ್ರೆಸ್‌ನ ಮನವಿಗೆ ದೀದಿ ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಕೋಲ್ಕತ್ತಾದ ರಾಜ್ಯ ಸಚಿವಾಲಯದಲ್ಲಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸಭೆ ನಡೆಸಿದ ನಂತರ ಈ ಬೆಳವಣಿಗೆ ನಡೆದಿದೆ. ಚಿದಂಬರಂ ಪ್ರಿಯಾಂಕ ಗಾಂಧಿಯವರ ರಾಯಭಾರಿಯಾಗಿ ಹೋಗಿದ್ದರು ಎಂದು ಮೂಲಗಳು ತಿಳಿಸಿವೆ.

ವಯನಾಡಿನಿಂದ ಚುನಾವಣಾ ಕಣಕ್ಕೆ ಧುಮುಕಲಿರುವ ಪ್ರಿಯಾಂಕ ಗಾಂಧಿ ಪರವಾಗಿ ಪ್ರಚಾರಕ್ಕೆ ಬರುವಂತೆ ಮಮತಾ ಬ್ಯಾನರ್ಜಿಗೆ ಕಾಂಗ್ರೆಸ್ ಮನವಿ ಮಾಡಿತ್ತು. ಕಾಂಗ್ರೆಸ್‌ನ ಮನವಿಗೆ ದೀದಿ ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಕೋಲ್ಕತ್ತಾದ ರಾಜ್ಯ ಸಚಿವಾಲಯದಲ್ಲಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸಭೆ ನಡೆಸಿದ ನಂತರ ಈ ಬೆಳವಣಿಗೆ ನಡೆದಿದೆ. ಚಿದಂಬರಂ ಅವರು ಪ್ರಿಯಾಂಕ ಗಾಂಧಿಯವರ ರಾಯಭಾರಿಯಾಗಿ ಬಂದಿದ್ದರು ಎಂದು ಮೂಲಗಳು ತಿಳಿಸಿವೆ.

Join Whatsapp
Exit mobile version