Home ರಾಷ್ಟ್ರೀಯ ಭಾರಿ ಮಳೆಗೆ ಚೆನ್ನೈ ನಗರ ತತ್ತರ: ಅಪಾರ ಹಾನಿ

ಭಾರಿ ಮಳೆಗೆ ಚೆನ್ನೈ ನಗರ ತತ್ತರ: ಅಪಾರ ಹಾನಿ

ಚೆನ್ನೈ: ದಕ್ಷಿಣ ಭಾರತದ ಅತ್ಯಂತ ದೊಡ್ಡ ನಗರಗಳ ಪೈಕಿ ಒಂದಾದ ತಮಿಳುನಾಡಿನ ರಾಜಧಾನಿ ಚೆನ್ನೈ ಭಾರೀ ಮಳೆಯಿಂದಾಗಿ ತತ್ತರಿಸಿ ಹೋಗಿದೆ. ಕಳೆದ ಕೆಲವು ದಿನಗಳಿಂದ ಅಲ್ಲಿ ಮಳೆಯ ಆರ್ಭಟ ಭೀಕರವಾಗಿದೆ. ನಿನ್ನೆ ಎಡಬಿಡದೆ ಸುರಿದ ಮಳೆಯಿಂದ ಇಡೀ ನಗರವೇ ನೀರಿನಲ್ಲಿ ಮುಳುಗಿ ಹೋದಂತಾಗಿದೆ. ಅಪಾರ ಹಾನಿ ಸಂಭವಿಸಿದ್ದು, ಇನ್ನೂ ಮಳೆ ಕಡಿಮೆಯಾಗುವ ಸೂಚನೆ ಸಿಕ್ಕಿಲ್ಲ. ಬದಲಿಗೆ ಭಾರಿ ಮಳೆಯ ಮುನ್ನೆಚ್ಚರಿಕೆ ಸಿಕ್ಕಿದೆ‌.

ನವೆಂಬರ್ 29 ರಿಂದ ಡಿಸೆಂಬರ್ 1 ರವರೆಗೆ ತಮಿಳುನಾಡು, ಪುದುಚೇರಿ, ಕಾರೈಕಲ್ ಹಾಗೂ ನವೆಂಬರ್ 30 & ಡಿಸೆಂಬರ್ 1ಕ್ಕೆ ಕೇರಳದಲ್ಲೂ ವಿವಿಧೆಡೆ ಭಾರಿ ಮಳೆಯ ಮುನ್ಸೂಚನೆಯ ನೀಡಲಾಗಿದೆ. ಈ ಮೂಲಕ ಮುಂದಿನ ಕೆಲ ದಿನಗಳ ಕಾಲ ಹೀಗೆ ಭಾರಿ ಮಳೆ ಬೀಳುವ ಕುರಿತು ಮುನ್ನೆಚ್ಚರಿಕೆ ಸಿಕ್ಕಿದೆ.

ಮುಂದಿನ 5 ದಿನಗಳಲ್ಲಿ ತಮಿಳುನಾಡು, ಪುದುಚೇರಿ, ಕಾರೈಕಾಲ್ ಮತ್ತು ಕೇರಳ ಸೇರಿ ಇನ್ನ ಕೆಲ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ನಿರೀಕ್ಷೆಯಿದೆ.

Join Whatsapp
Exit mobile version