Home ಟಾಪ್ ಸುದ್ದಿಗಳು ಸಿಕ್ಕಿಂನ ಮಾಜಿ ಸಚಿವ ಪೌಡ್ಯಾಲ್ ಶವ ಬಂಗಾಳದ ಕಾಲುವೆಯಲ್ಲಿ ಪತ್ತೆ

ಸಿಕ್ಕಿಂನ ಮಾಜಿ ಸಚಿವ ಪೌಡ್ಯಾಲ್ ಶವ ಬಂಗಾಳದ ಕಾಲುವೆಯಲ್ಲಿ ಪತ್ತೆ

ಗ್ಯಾಂಗ್ಟಕ್: ನಾಪತ್ತೆಯಾಗಿದ್ದ ಸಿಕ್ಕಿಂನ ಮಾಜಿ ಸಚಿವ ಆರ್.ಸಿ. ಪೌಡ್ಯಾಲ್ ಅವರ ಮೃತದೇಹವು ಪಶ್ಚಿಮ ಬಂಗಾಳದ ಸಿಲಿಗುರಿ ಸಮೀಪ ಕಾಲುವೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

80 ವರ್ಷದ ಪೌಡ್ಯಾಲ್ ಅವರ ಮೃತದೇಹ ಮಂಗಳವಾರ ಫೂಲ್ಭರೀಯ ತಿಸ್ತಾ ಕಾಲುವೆಯಲ್ಲಿ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.


ಒಂಬತ್ತು ದಿನಗಳ ಹಿಂದೆ, ಜುಲೈ 7ರಂದು ಪಾಕ್ಯಾಂಗ್ ಜಿಲ್ಲೆಯ ಚೋಟಾ ಸಿಂಗ್ಟಮ್ ನಿವಾಸಿಯಾದ ಪೌಡ್ಯಾಲ್ ಅವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಅವರನ್ನು ಹುಡುಕಲು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗಿತ್ತು.


ಮೃತದೇಹವನ್ನು ಗುರುತಿಸಲಾಗಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.

Join Whatsapp
Exit mobile version