2000 ಹುದ್ದೆಗಳಿಗೆ 25,000 ಉದ್ಯೋಗಾಕಾಂಕ್ಷಿಗಳು: ಏರ್ ಇಂಡಿಯಾ ಉದ್ಯೋಗ ನೇಮಕಾತಿಯಲ್ಲಿ ಕಾಲ್ತುಳಿತ..!

Prasthutha|

ಮುಂಬೈ: ಏರ್ ಪೋರ್ಟ್ ಲೋಡರ್ ಗಳ ಹುದ್ದೆಗಾಗಿ ಏರ್ ಇಂಡಿಯಾ ಹಮ್ಮಿಕೊಂಡಿದ್ದ ಉದ್ಯೋಗ ನೇಮಕಾತಿ ಮಂಗಳವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿಗೆ ಕಾರಣವಾಯಿತು.

- Advertisement -


2,216 ಹುದ್ದೆಗಳಿಗಾಗಿ ಸುಮಾರು 25,000 ಉದ್ಯೋಗಾಕಾಂಕ್ಷಿಗಳು ವಿಮಾನ ನಿಲ್ದಾಣದ ಬಳಿ ಜಮಾಯಿಸಿದ್ದರಿಂದ, ಅವರನ್ನು ನಿಯಂತ್ರಿಸಲು ವಿಮಾನ ನಿಲ್ದಾಣದ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು ಎಂದು ವರದಿಯಾಗಿದೆ.


ಅರ್ಜಿದಾರರು ಆಹಾರ ಮತ್ತು ನೀರಿಲ್ಲದೆ ಗಂಟೆಗಟ್ಟಲೆ ಕಾಯಬೇಕಾಯಿತು. ಅವರಲ್ಲಿ ಹಲವರು ಅಸ್ವಸ್ಥರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

- Advertisement -


ಏರ್ ಪೋರ್ಟ್ ಲೋಡರ್ ಗಳು ವಿಮಾನದಲ್ಲಿ ಸಾಮಾನುಗಳನ್ನು ಲೋಡ್ ಮಾಡುವುದು ಮತ್ತು ಇಳಿಸುವುದು ಮತ್ತು ಬ್ಯಾಗೇಜ್ ಬೆಲ್ಟ್ ಗಳು ಮತ್ತು ರಾಂಪ್ ಟ್ರಾಕ್ಟರುಗಳನ್ನು ನಿರ್ವಹಿಸುವ ಕಾರ್ಯವನ್ನು ನಿರ್ವಹಿಸುತ್ತಾರೆ. ಏರ್ ಪೋರ್ಟ್ ಲೋಡರ್ ಗಳ ವೇತನವು ತಿಂಗಳಿಗೆ ₹ 20,000 ರಿಂದ ₹ 25,000 ರ ನಡುವೆ ಇರುತ್ತದೆ.


ಇತ್ತೀಚೆಗಷ್ಟೇ ಗುಜರಾತ್ ನ ಖಾಸಗಿ ಕಂಪನಿಯೊಂದರಲ್ಲಿ ಖಾಲಿ ಇದ್ದ ಕೇವಲ 10 ಹುದ್ದೆಗಳಿಗೆ ಹತ್ತಿರತ್ತಿರ 1,800 ಉದ್ಯೋಗಾಕಾಂಕ್ಷಿಗಳು ಜಮಾಯಿಸಿ, ಕಟ್ಟಡದ ರೇಲಿಂಗ್ ಮುರಿದು ಬಿದ್ದಿದ್ದ ಘಟನೆ ನಡೆದಿತ್ತು.



Join Whatsapp
Exit mobile version