Home ಟಾಪ್ ಸುದ್ದಿಗಳು ಒಸಾಮಾ ಬಿನ್ ಲಾಡೆನ್ ಪುತ್ರ ಮೃತಪಟ್ಟಿಲ್ಲ: ವರದಿ

ಒಸಾಮಾ ಬಿನ್ ಲಾಡೆನ್ ಪುತ್ರ ಮೃತಪಟ್ಟಿಲ್ಲ: ವರದಿ

ಕಾಬೂಲ್: ಅಲ್‍ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಪುತ್ರ ಹಂಝಾ ಬಿನ್ ಲಾಡೆನ್ ಮೃತಪಟ್ಟಿಲ್ಲ, ಅಫ್ಘಾನಿಸ್ತಾನದಲ್ಲಿ ಅಲ್‍ಖೈದಾ ಸಂಘಟನೆಯನ್ನು ಮುನ್ನಡೆಸುತ್ತಿದ್ದಾನೆ ಎಂದು `ದಿ ಮಿರರ್’ ವರದಿ ಮಾಡಿದೆ.2019ರಲ್ಲಿ ಅಮೆರಿಕ ನಡೆಸಿದ ವೈಮಾನಿಕ ಹಂಝಾ ಬಿನ್ ಲಾದೆನ್ ಮೃತಪಟ್ಟಿರುವುದಾಗಿ ವರದಿಯಾಗಿತ್ತು.

ಗುಪ್ತಚರ ವರದಿಯನ್ನು ಉಲ್ಲೇಖಿಸಿ ದ ವರದಿಯು, ಹಂಝ ಮತ್ತು ಆತನ ಸಹೋದರ ಅಬ್ದುಲ್ಲಾ ಬಿನ್ ಲಾಡೆನ್ ಅಫ್ಘಾನಿಸ್ತಾನದಲ್ಲಿ ರಹಸ್ಯವಾಗಿ ಅಲ್‍ಖೈದಾವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದೆ. ಈ ವರದಿಗೆ ತಾಲಿಬಾನ್ ವಿರೋಧಿ ಮಿಲಿಟರಿ ಒಕ್ಕೂಟ `ದಿ ನ್ಯಾಷನಲ್ ಮೊಬಿಲೈಸೇಷನ್ ಫ್ರಂಟ್(ಎನ್‍ಎಂಎಫ್)’ ಸಹಮತ ವ್ಯಕ್ತಪಡಿಸಿದೆ.

ಈತ 450 ಸ್ನೈಪರ್(ಶಾರ್ಪ್ ಶೂಟರ್)ಗಳ ನಿರಂತರ ರಕ್ಷಣೆಯಲ್ಲಿ ಉತ್ತರ ಅಫ್ಘಾನಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದು, 2021ರಲ್ಲಿ ಕಾಬೂಲ್ ತಾಲಿಬಾನ್ ವಶಕ್ಕೆ ಬಂದ ಬಳಿಕ ಹಂಝಾ ಬಿನ್ ಲಾದೆನ್ ಪಂಜ್‍ಶಿರ್‌ನ ಡಾರಾ ಅಬ್ದುಲ್ಲಾ ಖೇಲ್ ಜಿಲ್ಲೆಗೆ ಸ್ಥಳಾಂತರಗೊಂಡು ಅರಬ್ ಮತ್ತು ಪಾಕಿಸ್ತಾನ್ ಶಾರ್ಪ್ ಶೂಟರ್‌ಗಳ ರಕ್ಷಣೆಯಲ್ಲಿದ್ದಾನೆ. ಈತನ ನೇತೃತ್ವದಡಿ ಅಲ್‍ಖೈದಾ ಮರುಸಂಘಟನೆಗೊಳ್ಳುತ್ತಿದೆ ಎಂದು ವರದಿ ಹೇಳಿದೆ.

Join Whatsapp
Exit mobile version