Home ಟಾಪ್ ಸುದ್ದಿಗಳು ಒಮಾನ್ ಕರಾವಳಿಯಲ್ಲಿ ಮುಳುಗಿದ ತೈಲ ಟ್ಯಾಂಕರ್: 13 ಭಾರತೀಯ ಸಿಬ್ಬಂದಿ ನಾಪತ್ತೆ

ಒಮಾನ್ ಕರಾವಳಿಯಲ್ಲಿ ಮುಳುಗಿದ ತೈಲ ಟ್ಯಾಂಕರ್: 13 ಭಾರತೀಯ ಸಿಬ್ಬಂದಿ ನಾಪತ್ತೆ

ಮಸ್ಕತ್: ಒಮಾನ್ ಸಾಗರ ಪ್ರದೇಶದಲ್ಲಿ ತೈಲ ಸಾಗಣೆ ಹಡಗು ಮಗುಚಿ 13 ಭಾರತೀಯರು ಸೇರಿದಂತೆ 16 ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಸಾಗರ ಭದ್ರತಾ ಕೇಂದ್ರ ತಿಳಿಸಿದೆ.


ನಾಪತ್ತೆಯಾಗಿರುವ ಸಿಬ್ಬಂದಿ ಪೈಕಿ ಮೂವರು ಶ್ರೀಲಂಕನ್ನರು ಎನ್ನಲಾಗಿದೆ.


ಒಮಾನ್ ನ ಪ್ರಮುಖ ಬಂದರು ‘ಡುಗ್ಮ್’ನಿಂದ ಹೊರಟಿದ್ದ ‘ಪ್ರೆಸ್ಟೀಜ್ ಪಾಲ್ಕನ್’ ಹಡಗು ಪಲ್ಟಿಯಾಗಿದೆ. ಪೂರ್ವ ಆಫ್ರಿಕಾದ ಕಾಮೋರ್ಸ್ ದೇಶದ ತೈಲ ಟ್ಯಾಂಕರ್ ಇದರಲ್ಲಿತ್ತು ಎಂದು ಸಾಗರ ಭದ್ರತಾ ಕೇಂದ್ರ ರಾಯಿಟರ್ಸ್ಗೆ ಮಂಗಳವಾರ ತಿಳಿಸಿದೆ.

Join Whatsapp
Exit mobile version