ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ನಿಗದಿಯಾಗಿದ್ದ ಸಮಯವನ್ನು ಈ ವರ್ಷದಿಂದ ಕಡಿತ ಮಾಡಿದೆ.
ಹೊಸ ನಿಯಮ ಈ ವರ್ಷದ ಅಂದರೆ 2024-25ನೇ ಸಾಲಿನ ಪರೀಕ್ಷೆಯಿಂದಲೇ ಜಾರಿ ಆಗಲಿದೆ. ಸಮಯ ಕಡಿತ ಮಾಡಿರೋ ಸಂಬಂಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಲಾಖೆ ವೆಬ್ ಸೈಟ್ ನಲ್ಲಿ ಪ್ರಕಟ ಮಾಡಿದೆ.
ಈ ಮೊದಲು ವಿದ್ಯಾರ್ಥಿಗಳು ಉತ್ತರ ಬರೆಯಲು 3 ಗಂಟೆ 15 ನಿಮಿಷ ಸಮಯ ಕೊಡಲಾಗ್ತಿತ್ತು.3 ಗಂಟೆ ಉತ್ತರ ಬರೆಯಲು ಮತ್ತು 15 ನಿಮಿಷಗಳು ಪ್ರಶ್ನೆ ಪತ್ರಿಕೆ ಓದಲು ನೀಡಲಾಗುತ್ತಿತ್ತು. ಹೊಸ ನಿಯಮದ ಪ್ರಕಾರ ಉತ್ತರ ಬರೆಯಲು 2 ಗಂಟೆ 45 ನಿಮಿಷ ಸಮಯ ಮತ್ತು 15 ನಿಮಿಷ ಪ್ರಶ್ನೆ ಪತ್ರಿಕೆ ಓದಲು ಅವಕಾಶ ನೀಡಲಾಗಿದ್ದು, 15 ನಿಮಿಷ ಸಮಯವನ್ನು ಕಡಿತ ಮಾಡಲಾಗಿದೆ.
ಸಮಯ ಕಡಿತಕ್ಕೆ ಬೋರ್ಡ್ ಕಾರಣ ನೀಡಿದೆ. ಮೊದಲು 3 ಗಂಟೆ 15 ನಿಮಿಷ ಇದ್ದ ಸಮಯದಲ್ಲಿ 100 ಅಂಕಗಳಿಗೆ ಪ್ರಶ್ನೆ ಪತ್ರಿಕೆ ಕೊಡಲಾಗಿತ್ತಿತ್ತು. ಆದರೆ ಈಗ 70/80 ಅಂಕಗಳಿಗೆ ಲಿಖಿತ ಪರೀಕ್ಷೆ ಇದ್ದು,ಉಳಿದ ಅಂಕಗಳು ಇಂಟ್ರನಲ್ ಅಸೆಸ್ಮೆಂಟ್ ಗೆ ನೀಡಲಾಗ್ತಿದೆ. ಈ ಹಿನ್ನಲೆಯಲ್ಲಿ 15 ನಿಮಿಷ ಉತ್ತರ ಬರೆಯಲು ಕಡಿತ ಮಾಡಲಾಗಿದೆ ಅನ್ನೋದು ಇಲಾಖೆ ವಾದವಾಗಿದೆ.