Home ಕ್ರೀಡೆ ಕಾಮನ್ ವೆಲ್ತ್ ಗೇಮ್ಸ್: ಟೇಬಲ್ ಟೆನಿಸ್ ನಲ್ಲಿ ಚಿನ್ನ ಬಾಚಿದ ಭಾರತ ಪುರುಷರ ತಂಡ

ಕಾಮನ್ ವೆಲ್ತ್ ಗೇಮ್ಸ್: ಟೇಬಲ್ ಟೆನಿಸ್ ನಲ್ಲಿ ಚಿನ್ನ ಬಾಚಿದ ಭಾರತ ಪುರುಷರ ತಂಡ

ಬರ್ಮಿಂಗ್ಹ್ಯಾಮ್: ಭಾರತದ ಪುರುಷರ ಟೇಬಲ್ ಟೆನಿಸ್ ತಂಡ ಮಂಗಳವಾರ ನಡೆದ ಸಿಂಗಾಪುರ್ ವಿರುದ್ಧದ ತೀವ್ರ ಹೋರಾಟದ ನಂತರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕವನ್ನು ಬಾಚಿಕೊಂಡಿತು.

ವಿಶ್ವದ 121 ನೇ ರ ರ್‍ಯಾಂಕ್ ನ ಹರ್ಮೀತ್ ಮೂರನೇ ಸಿಂಗಲ್ಸ್ ನಲ್ಲಿ 133ನೇ ಶ್ರೇಯಾಂಕಿತ ಝೆ ಯು ಕ್ಲಾರೆನ್ಸ್ ಚೆವ್ ಅವರನ್ನು 11-8, 11-5, 11-6 ಸೆಟ್ ಗಳಿಂದ ಸೋಲಿಸಿ ಸಿಡಬ್ಲ್ಯುಜಿ ಇತಿಹಾಸದಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕವನ್ನು ತಂದುಕೊಟ್ಟರು.

ಮ್ಯಾಂಚೆಸ್ಟರ್ 2002 ರಲ್ಲಿ ಕ್ರೀಡೆಯ ಪ್ರಾರಂಭದ ನಂತರ ಭಾರತ ಗೆದ್ದ ಏಳನೇ ಚಿನ್ನ ಇದಾಗಿದೆ. ಭಾರತವು ಸಿಂಗಾಪುರವನ್ನು ಸೋಲಿಸುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ ಮೊದಲ ಸಿಂಗಲ್ಸ್ ನಲ್ಲಿ ಅನುಭವಿ ಶರತ್ ಕಮಲ್ ಸಿಂಗಾಪುರದೊಂದಿಗೆ 1-1 ರಲ್ಲಿ ಸಮಬಲವನ್ನು ಕಾಯ್ದುಕೊಂಡರು

ಭಾರತ ಪುರುಷರ ತಂಡ ಒಟ್ಟು 3-1 ಅಂತರದಿಂದ ಸಿಂಗಾಪುರವನ್ನು ಸೋಲಿಸುವ ಮೂಲಕ ಚಿನ್ನದ ಪದಕ ಜಯಿಸಿತು. ಮೊದಲ ಪಂದ್ಯದಲ್ಲಿ ಸತ್ಯನ್ ಜ್ಞಾನಶೇಖರನ್ ಮತ್ತು ಹರ್ಮೀತ್ ದೇಸಾಯಿ ಜೋಡಿ ಗೆಲುವು ಸಾಧಿಸುವ ಮೂಲಕ 1-0 ಇಂದ ಮುನ್ನಡೆ ದೊರಕಿಸಿಕೊಟ್ಟರು

Join Whatsapp
Exit mobile version