ಬೋಳಿಯಾರ್‌ನಲ್ಲಿ ಮತ್ತೆ ಮುಸ್ಲಿಂ ಯುವಕರ ಬಂಧನ: SDPI ಆಕ್ರೋಶ

Prasthutha|

ಮಂಗಳೂರು: ಬೋಳಿಯಾರ್‌ನಲ್ಲಿ ಮತ್ತೆ ಮುಸ್ಲಿಮರ ಮನೆಗೆ ದಾಳಿಸಿ ಓರ್ವರನ್ನು ಬಂಧಿಸಲಾಗಿದ್ದು, ಎಸ್ಡಿಪಿಐ ಜಿಲ್ಲಾದ್ಯಕ್ಷ ಅನ್ವರ್ ಸಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ದ‌ಕ ಜಿಲ್ಲಾ ಪೊಲೀಸ್ ಕಮೀಷನ್‌ರವರೇ, ಬೋಳಿಯಾರ್ ಘಟನೆಗೆ ಸಂಬಂಧಿಸಿ 13 ಮುಸ್ಲಿಮ್ ಯುವಕರನ್ನು ನೀವು ಬಂಧಿಸಿದ ನಂತರವೂ ಬಂಧನದ ದಾಹ ಮುಗಿದಿಲ್ಲವೇ? ಪುನಃ ದಾಳಿ ನಡೆಸಿ ಒಬ್ಬ ಯುವಕನನ್ನು ವಶಕ್ಕೆ ಪಡೆದದ್ದು ಯಾಕೆ? ಘಟನೆಗೆ ಮೂಲ ಕಾರಣಕರ್ತರು ಯಾರೆಂದು ನೀವೇ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿದ್ದರೂ ಯಾಕಾಗಿ ಇಂದಿನವರೆಗೆ ಒಬ್ಬನೇ ಒಬ್ಬ ಸಂಘಿಯನ್ನು ಬಂಧಿಸಿಲ್ಲ ಎಂದು ಅವರು X ಮೂಲಕ ಪ್ರಶ್ನಿಸಿದ್ದಾರೆ.

ಸ್ಥಳೀಯ ಶಾಸಕರೂ ಆದ ಯುಟಿ ಖಾದರ್‌ರನ್ನು ಕೂಡ ಅನ್ವರ್ ಸಾದತ್ ತರಾಟೆಗೆ ತೆಗೆದುಕೊಂಡಿದ್ದಾರೆ. ಮುಸ್ಲಿಮರ ಮತ ಪಡೆದು ಅಧಿಕಾರದ ಸಿಹಿ ಅನುಭವಿಸುತ್ತಿರುವ ಯುಟಿ‌‌ ಖಾದರ್‌ರವರೇ, ನಿಮ್ಮ ಕ್ಷೇತ್ರದ ಬೊಳಿಯಾರಿನಲ್ಲಿ ಮುಸ್ಲಿಮರು ಇಂದು ಅನಾಥರಾಗಿದ್ದಾರೆ. ನೀವು ಬ್ಯಾಲೆನ್ಸಿಂಗ್ ರಾಜಕಾರಣ ಮಾಡಿ BJP ಯನ್ನು ಮೆಚ್ಚಿಸುವ ಕೆಲಸ ಬಿಟ್ಟುಬಿಡಿ. ಮುಸ್ಲಿಮರ ಪರವಾಗಿ ಮಾತನಾಡದಿದ್ದರೂ ನ್ಯಾಯದ ಪರವಾಗಿ ನಿಂತು ತಾರತಮ್ಯವನ್ನು ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯರನ್ನೂ ಎಸ್ಡಿಪಿಐ ಜಿಲ್ಲಾಧ್ಯಕ್ಷ ಟ್ಯಾಗ್ ಮಾಡಿದ್ದಾರೆ.

Join Whatsapp
Exit mobile version