ಕಾಟಿಪಳ್ಳ ಜಲೀಲ್ ಹತ್ಯೆ ಪ್ರಕರಣ: ಎರಡನೇ ಪ್ರಮುಖ ಆರೋಪಿಗೆ ಜಾಮೀನು

Prasthutha|

- Advertisement -

ಮಂಗಳೂರು: ಕಾಟಿಪಳ್ಳದ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಪ್ರಮುಖ ಆರೋಪಿ ಸುವಿನ್ ಗೆ ಹೈಕೋರ್ಟ್ ಷರತ್ತುಬದ್ದ ಜಾಮೀನು ನೀಡಿದೆ.

2022 ಡಿಸೆಂಬರ್ 24 ರಂದು ಸಂಘಪರಿವಾರದ ಕಾರ್ಯಕರ್ತರು ಫ್ಯಾನ್ಸಿ ಅಂಗಡಿಗೆ ರಾತ್ರಿ ಆಗಮಿಸಿ ಅಬ್ದುಲ್ ಜಲೀಲ್ ನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡ ಜಲೀಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

- Advertisement -

ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಶೈಲೇಶ್ ಮೊದಲ ಆರೋಪಿಯಾಗಿದ್ದರೆ, ಸುವಿನ್ ಎರಡನೇ ಆರೋಪಿಯಾಗಿದ್ದಾನೆ. ಈ ಪೈಕಿ ಸುವಿನ್ ಗೆ ಹೈಕೋರ್ಟ್ ಜಾಮೀನು ನೀಡಿದೆ.

Join Whatsapp
Exit mobile version