Home ಟಾಪ್ ಸುದ್ದಿಗಳು ವಿಶಾಖಪಟ್ಟಣಂ: ಕೈಗಾರಿಕಾ ಪ್ರದೇಶದಲ್ಲಿ ಅನಿಲ ಸೋರಿಕೆ: 50 ಕಾರ್ಮಿಕರು ಅಸ್ವಸ್ಥ

ವಿಶಾಖಪಟ್ಟಣಂ: ಕೈಗಾರಿಕಾ ಪ್ರದೇಶದಲ್ಲಿ ಅನಿಲ ಸೋರಿಕೆ: 50 ಕಾರ್ಮಿಕರು ಅಸ್ವಸ್ಥ

ವೈಜಾಗ್: ಆಂಧ್ರಪ್ರದೇಶದ ಅನಕಪಲ್ಲೆ ಜಿಲ್ಲೆಯ ಬ್ರಾಂಡಿಕ್ಸ್ ವಿಶೇಷ ಆರ್ಥಿಕ ವಲಯದಲ್ಲಿರುವ ಉಡುಪು ತಯಾರಿಕಾ ಘಟಕದಲ್ಲಿ ಅನಿಲ ಸೋರಿಕೆಯಿಂದ ಕನಿಷ್ಠ 50 ಕಾರ್ಮಿಕರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅನಿಲ ಸೋರಿಕೆಯಾದ ನಂತರ ಕಾರ್ಮಿಕರು ವಾಕರಿಕೆ ಮತ್ತು ವಾಂತಿ ಉಂಟಾಗಿದ್ದು, SEZ ವೈದ್ಯಕೀಯ ಕೇಂದ್ರದಲ್ಲಿ ಕಾರ್ಮಿಕರಿಗೆ ಪ್ರಥಮ ಚಿಕಿತ್ಸೆ ನೀಡಿ, ನಂತರ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು ಎಂದು ತಿಳಿದು ಬಂದಿದೆ.

ಬ್ರಾಂಡಿಕ್ಸ್ ನ ಆವರಣದಲ್ಲಿ ಅನಿಲ ಸೋರಿಕೆ ನಡೆದಿದೆ ಎಂದು ವರದಿಯಾಗಿದ್ದು, 50 ಜನರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಆವರಣದಲ್ಲಿ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ ಎಂದು ಅನಕಪಲ್ಲೆ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

Join Whatsapp
Exit mobile version