Home ರಾಷ್ಟ್ರೀಯ ವಂದೇ ಭಾರತ್ ರೈಲಿಗೆ ಚಾಲನೆ ವೇಳೆ ನೂಕುನುಗ್ಗಲು: ಹಳಿಗೆ ಜಾರಿ ಬಿದ್ದ ಬಿಜೆಪಿ ಶಾಸಕಿ

ವಂದೇ ಭಾರತ್ ರೈಲಿಗೆ ಚಾಲನೆ ವೇಳೆ ನೂಕುನುಗ್ಗಲು: ಹಳಿಗೆ ಜಾರಿ ಬಿದ್ದ ಬಿಜೆಪಿ ಶಾಸಕಿ

ಲಕ್ನೋ: ಆಗ್ರಾ-ವಾರಣಾಸಿ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಚಾಲನೆ ನೀಡುವ ವೇಳೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಬಿಜೆಪಿ ಶಾಸಕಿ ಸರಿತಾ ಭದೌರಿಯಾ ಹಳಿಗಳ ಮೇಲೆ ಜಾರಿ ಬಿದ್ದಿದ್ದಾರೆ.
ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.


ಹೊಸ ವಂದೇ ಭಾರತ್ ರೈಲಿಗಾಗಿ ಜನರು ಕುತೂಹಲದಿಂದ ಕಾಯುತ್ತಿರುವಂತೆ ಕಿಕ್ಕಿರಿದ ಪ್ಲಾಟ್ ಫಾರ್ಮ್ ನಲ್ಲಿ ಸರಿತಾ ಬದೌರಿಯಾ ರೈಲಿಗೆ ಚಾಲನೆ ಮಾಡಲು ನಿಂತಿದ್ದರು. ಕೆಲವೇ ಕ್ಷಣಗಳಲ್ಲಿ ನೂಕು ನುಗ್ಗಲಿನಿಂದಾಗಿ, 61 ವರ್ಷದ ಬಿಜೆಪಿ ಶಾಸಕಿ ರೈಲು ಹಳಿಗಳ ಮೇಲೆ ಬಿದ್ದಿದ್ದು, ಅಲ್ಲಿದ್ದವರು ಸಹಾಯ ಮಾಡಿ ಫ್ಲಾಟ್ ಫಾರ್ಮ್ ಮೇಲೆ ಹತ್ತಿಸಿದ್ದಾರೆ.


ಸೆಪ್ಟೆಂಬರ್ 15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆರು ಹೊಸ ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸಿದ ನಂತರ ಆಗ್ರಾದಿಂದ ರೈಲಿಗೆ ಫ್ಲ್ಯಾಗ್ ಆಫ್ ಮಾಡಲಾಯಿತು.


ಘಟನೆಯ ಕುರಿತು ಪ್ರತಿಕ್ರಿಯಿಸಿದ ಬಿಜೆಪಿಯ ಇಟಾವಾ ಘಟಕದ ಖಜಾಂಚಿ ಸಂಜೀವ್ ಭದೌರಿಯಾ, “ಶಾಸಕಿಯನ್ನು ಹಳಿಗಳಿಂದ ಮೇಲೆತ್ತಿ ನಂತರ ಫ್ಲಾಗ್-ಆಫ್ ಕಾರ್ಯಕ್ರಮ ನಡೆಯಿತು ಎಂದು ಹೇಳಿರುವುದಾಗಿ ಎಂದು ಪಿಟಿಐ ವರದಿ ಮಾಡಿದೆ. ವೈದ್ಯರು ಸರಿತಾ ಬದೌರಿಯಾ ಅವರನ್ನು ಪರೀಕ್ಷಿಸಿದ್ದಾರೆ ಮತ್ತು ಯಾವುದೇ ಗಂಭೀರವಾದ ಗಾಯಗಳು ವರದಿಯಾಗಿಲ್ಲ ಎಂದು ಅವರು ಹೇಳಿದರು.

Join Whatsapp
Exit mobile version