ವಾಷಿಂಗ್ಟನ್: 2020ರಲ್ಲಿ ಕಾಣಿಸಿಕೊಂಡು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದುಕೊಂಡಿದ್ದ ಕೊರೊನಾ ವೈರಸ್ ಇದೀಗ ಮತ್ತೊಂದು ಹೊಸ ರೂಪ ಪಡೆದುಕೊಂಡಿದೆ.
ಎಕ್ಸ್ ಇಸಿ (XEC) ಎಂಬ ಹೆಸರಿನ ಕೋವಿಡ್ ರೂಪಾಂತರ ಯುರೋಪ್ ದೇಶಗಳಲ್ಲಿ ಪತ್ತೆಯಾಗಿದ್ದು, ಸುಮಾರು 27 ದೇಶಗಳಿಗೆ ಭಾರಿ ಆತಂಕ ಹುಟ್ಟಿಸಿದೆ. ಇದು ಅತ್ಯಂತ ವೇಗವಾಗಿ ಹರಡುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಎಚ್ಚರಿಸಿರುವುದಾಗಿ ವರದಿಯಾಗಿದೆ.
ಮೂಲಗಳ ಪ್ರಕಾರ, ಒಮಿಕ್ರಾನ್ ಉಪತಳಿಯಾಗಿರುವ ಎಕ್ಸ್ ಇಸಿ ರೂಪಾಂತರವನ್ನು ಕಳೆದ ಜೂನ್ ನಲ್ಲಿ ಜರ್ಮನಿಯಲ್ಲಿ ಗುರುತಿಸಲಾಯಿತು. ಬಳಿಕ ಯುಕೆ, ಯುಎಸ್, ಡೆನ್ಮಾರ್ಕ್, ಪೋಲೆಂಡ್, ನಾರ್ವೆ, ಲಕ್ಸೆಂಬರ್ಗ್, ಉಕ್ರೇನ್ , ಪೋರ್ಚುಗಲ್ ಸೇರಿದಂತೆ ಸುಮಾರು 27 ದೇಶಗಳಲ್ಲಿ 500 ಮಾದರಿಗಳು ಕಾಣಿಸಿಕೊಂಡಿವೆ.
ಇದು ಅತ್ಯಂತ ವೇಗವಾಗಿ ಹರಡುವ ಸಾಧ್ಯತೆಗಳಿವೆ. ಅದರಲ್ಲಿ ಜರ್ಮನಿ, ಡೆನ್ಮಾರ್ಕ್ ನಂತಹ ದೇಶಗಳಲ್ಲಿ ಮಾರಣಾಂತಿಕ ಪ್ರಮಾಣದಲ್ಲಿ ವೈರಸ್ ಹರಡುತ್ತಿವೆ. ಎಚ್ಚೆತ್ತು ಆದಷ್ಟು ಬೇಕ ಲಸಿಕೆ ಪಡೆದುಕೊಂಡರೇ ಕನಿಷ್ಠ ಮರಣದಿಂದ ತಪ್ಪಿಸಿಕೊಳ್ಳಬಹುದು ಎಂದು ಲಂಡನ್ ನಲ್ಲಿರುವ ಜೆನೆಟಿಕ್ಸ್ ಇನ್ಸ್ಟಿಟ್ಯೂಟ್ನ ನಿರ್ದೇಶಕ ಪ್ರೊಫೆಸರ್ ಫ್ರಾಂಕೋಯಿಸ್ ಬಲೂಕ್ಸ್ ತಿಳಿಸಿದ್ದಾರೆ.