Home ಟಾಪ್ ಸುದ್ದಿಗಳು ಅರ್ಕುಳ ದನಮಾಂಸ ಮಾರಾಟ | ಆಸ್ತಿ ಮುಟ್ಟುಗೋಲಿನ ನೋಟೀಸು ಎಂಬುದು ಸುಳ್ಳು ಸುದ್ದಿ

ಅರ್ಕುಳ ದನಮಾಂಸ ಮಾರಾಟ | ಆಸ್ತಿ ಮುಟ್ಟುಗೋಲಿನ ನೋಟೀಸು ಎಂಬುದು ಸುಳ್ಳು ಸುದ್ದಿ

ಮಂಗಳೂರು : ಅರ್ಕುಳದಲ್ಲಿ ಇತ್ತೀಚೆಗೆ ಕಾನೂನು ಬಾಹಿರವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂದು ಬಾತಿಶ್ ಎಂಬುವವರನ್ನು ಬಂಧಿಸಲಾಗಿತ್ತು. ಇದೀಗ ಆ ವ್ಯಕ್ತಿಗೆ ಆಸ್ತಿ ಮುಟ್ಟುಗೋಲು ನೋಟೀಸು ಹೊರಡಿಸಲಾಗಿದೆ ಎಂಬ ವದಂತಿ ಹಬ್ಬುತ್ತಿದೆ. ಇದು ಸತ್ಯವಲ್ಲ ಎಂದು ಕುಟುಂಬಸ್ಥರು ಸ್ಪಷ್ಟನೆ ನೀಡಿದ್ದು, ನಮಗೆ ಇದುವರೆಗೆ ಅಂತಹ ಯಾವುದೇ ನೋಟೀಸು ಬಂದಿಲ್ಲ ಎಂದು ದೃಢಪಡಿಸಿದ್ದಾರೆ.

ಪರವಾನಿಗೆ ಇಲ್ಲದೆ ಎ.ಕೆ. ಖಾಲಿದ್ ಎಂಬವರಿಗೆ ಸೇರಿದ ಮನೆಗೆ ತಾಗಿಕೊಂಡಿರುವ ಶೆಡ್ ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಅರ್ಕುಳ ಗ್ರಾಮದ ಕೋಟೆ ನಿವಾಸಿ ಬಾತಿಶ್ ಅವರನ್ನು ಪೊಲೀಸರು ಬಂಧಿಸಿದ್ದರು. 95 ಕೆ.ಜಿ. ದನದ ಮಾಂಸ ಮತ್ತು ಸ್ಥಳಗಳಲ್ಲಿದ್ದ ಸೊತ್ತುಗಳನ್ನು ವಶಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಆದರೆ ಆರೋಪಿಯ ಆಸ್ತಿಯನ್ನು ಯುಪಿ ಮಾದರಿಯಲ್ಲಿ ನಲ್ಲಿ ಮುಟ್ಟುಗೋಲು ಮಾಡಲಾಗಿದೆ, ಇದು ಬುಲ್ಡೋಝರ್ ಪ್ರಹಾರದ ಮುನ್ಸೂಚನೆ, ಇದು ಶಾಸಕ ಭರತ್ ಶೆಟ್ಟಿಯವರ ಸಾಧನೆ ಎಂದೆಲ್ಲಾ ಎಂಬ ಸುಳ್ಳು ಸುದ್ದಿಗಳು ವೈರಲ್ ಆಗುತ್ತಿವೆ. ಇದು ಸತ್ಯಕ್ಕೆ ದೂರವಾಗಿದ್ದು, ಸ್ಥಳದಲ್ಲಿದ್ದ ಮಾಂಸ ಮತ್ತು ಸಲಕರಣೆ ವಶಪಡಿಸಿದ್ದಲ್ಲದೆ ಯಾವುದೇ ಆಸ್ತಿ ಮುಟ್ಟುಗೋಲಿನ ನೋಟೀಸು ಬಂದಿಲ್ಲ ಎಂದು ಆರೋಪಿ ಬಾತಿಶ್ ಕುಟುಂಬಸ್ಥರು ಸ್ಪಷ್ಟೀಕರಣ ನೀಡಿದ್ದಾರೆ.

Join Whatsapp
Exit mobile version