Home ಟಾಪ್ ಸುದ್ದಿಗಳು ಸ್ಪೀಕರ್ ಸ್ಥಾನಕ್ಕೆ ಎನ್’ಡಿಎಯಿಂದ ಓಂ ಬಿರ್ಲಾ, ಇಂಡಿಯಾದಿಂದ ಸುರೇಶ್ ನಾಮಪತ್ರ

ಸ್ಪೀಕರ್ ಸ್ಥಾನಕ್ಕೆ ಎನ್’ಡಿಎಯಿಂದ ಓಂ ಬಿರ್ಲಾ, ಇಂಡಿಯಾದಿಂದ ಸುರೇಶ್ ನಾಮಪತ್ರ

ನವದೆಹಲಿ: ಲೋಕಸಭಾ ಸ್ಪೀಕರ್ ಚುನಾವಣೆಗೆ ಎನ್ ಡಿಎ ಅಭ್ಯರ್ಥಿಯಾಗಿ ಓಂ ಬಿರ್ಲಾ ಹಾಗೂ ಇಂಡಿಯಾ ಒಕ್ಕೂಟ ಅಭ್ಯರ್ಥಿಯಾಗಿ ಕೆ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.


ಲೋಕಸಭೆ ಸ್ಪೀಕರ್ ಹುದ್ದೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಎನ್ ಡಿಎ ಮತ್ತು ಪ್ರತಿಪಕ್ಷ ಇಂಡಿಯಾ ಒಕ್ಕೂಟ ಒಮ್ಮತಕ್ಕೆ ಬಂದಿಲ್ಲ. ಹೀಗಾಗಿ ಎರಡು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಈ ಹಿಂದೆ 1952 ಹಾಗೂ 1974ರಲ್ಲಿಯೂ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಸ್ವತಂತ್ರ ಭಾರತದಲ್ಲಿ 1952ರಲ್ಲಿ ಮೊಟ್ಟ ಮೊದಲ ಬಾರಿಗೆ ಜಿವಿ ಮಾಳವಂಕರ್ ಮತ್ತು ಶಂಕರ್ ಶಾಂತಾರಾಮ್ ನಡುವೆ ಸ್ಪೀಕರ್ ಹುದ್ದೆಗೆ ಚುನಾವಣೆ ಪೈಪೋಟಿ ಏರ್ಪಟ್ಟಿತ್ತು. ಆ ಬಳಿಕ 1976ರಲ್ಲಿ ತುರ್ತು ಪರಿಸ್ಥಿತಿ ಸಮಯದಲ್ಲಿ ಸ್ಪೀಕರ್ ಚುನಾವಣೆ ನಡೆದಿತ್ತು. ಆ ಸಮಯದಲ್ಲಿ ಬಲಿಗ್ರಾಮ ಭಗತ್ ಹಾಗೂ ಜಗನ್ನಾಥ ರಾವ್ ನಡುವೆ ಚುನಾವಣೆ ನಡೆದಿತ್ತು. ಈಗ 2024ರಲ್ಲಿ ಮೂರನೇ ಬಾರಿಗೆ ಚುನಾವಣೆ ನಡೆಯಲಿದೆ. ಇಲ್ಲಿಯವರೆಗೆ ಪಕ್ಷ ಮತ್ತು ವಿರೋಧ ಪಕ್ಷಗಳ ಒಮ್ಮತದ ಮೇರೆಗೆ ಸ್ಪೀಕರ್ ನೇಮಕ ಮಾಡಲಾಗಿತ್ತು.

Join Whatsapp
Exit mobile version