Home ಟಾಪ್ ಸುದ್ದಿಗಳು ‘ಕೇರಳ ರಾಜ್ಯದ ಹೆಸರು ‘ಕೇರಳಂ’: ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ!

‘ಕೇರಳ ರಾಜ್ಯದ ಹೆಸರು ‘ಕೇರಳಂ’: ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ!

ಕೇರಳ ರಾಜ್ಯ ವಿಧಾನಸಭೆಯು ಸೋಮವಾರ ರಾಜ್ಯದ ಹೆಸರನ್ನು ಕೇರಳಂ ಎಂದು ಅಧಿಕೃತವಾಗಿ ಬದಲಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು.


ಕಳೆದ ವರ್ಷ ಇದೇ ನಿರ್ಣಯವನ್ನು ಕೇರಳ ವಿಧಾನಸಭೆಯಲ್ಲಿ ಇಡಲಾಗಿತ್ತು. ಸರ್ವಾನುಮತದಿಂದ ಈ ಪ್ರಸ್ತಾವನಗೆ ಅಂಗೀಕಾರ ದೊರಕಿತ್ತು. ಬಳಿಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಕೆಲ ಅಂಶಗಳಲ್ಲಿ ತಿದ್ದುಪಡಿಗೆ ಸೂಚಿಸಿ ಪ್ರಸ್ತಾವನೆಯನ್ನು ಕೇರಳ ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿತ್ತು. ಹೀಗಾಗಿ ತಿದ್ದುಪಡಿ ಮೂಲಕ ಕೇರಳ ವಿಧಾನಸಭೆಯಲ್ಲಿ 2ನೇ ಬಾರಿಗೆ ಪ್ರಸ್ತಾವನೆಗೆ ಅಂಗೀಕಾರ ಸಿಕ್ಕಿದೆ.


ಸಂವಿಧಾನದ ಮೊದಲ ಪರಿಚ್ಚೇದಧ ಆರ್ಟಿಕಲ್ 3ರ ಅಡಿಯಲ್ಲಿ ರಾಜ್ಯದ ಹೆಸರು ಬದಲಿಸುವ ಪ್ರಸ್ತಾವನೆ ಮಂಡಿಸಲಾಗಿತ್ತು. IUML ಶಾಸಕ ಎಂ ಸಂಶುದ್ದೀನ್ ತಿದ್ದುಪಡಿ ಪ್ರಸ್ತಾವನೆಯನ್ನು ಅಂಗೀಕಾರಕ್ಕೆ ಹಾಕಿದರು. ಸರ್ವಾನುಮತದಿಂದ ಕೇರಳ ವಿಧಾನಸಭೆ ಕೇರಳಂ ಹೆಸರು ಬದಲಿಸುವ ನಿರ್ಣಯಕ್ಕೆ ಅಂಗೀಕಾರ ದೊರಕಿದೆ.


‘ರಾಜ್ಯವನ್ನು ಮಲಯಾಳಂನಲ್ಲಿ ಕೇರಳಂ ಎಂದು ಕರೆಯಲಾಗುತ್ತದೆ. ಆದರೆ ಇತರ ಭಾಷೆಗಳಲ್ಲಿ ಅದು ಇನ್ನೂ ಕೇರಳ ಎಂದೇ ಇದೆ. ಸಂವಿಧಾನದ ಮೊದಲ ಶೆಡ್ಯೂಲ್ ನಲ್ಲಿ ಕೂಡ ನಮ್ಮ ರಾಜ್ಯದ ಹೆಸರನ್ನು ಕೇರಳ ಎಂದು ಬರೆಯಲಾಗಿದೆ. ಹೀಗಾಗಿ ಇದಕ್ಕೆ ತಿದ್ದುಪಡಿ ತಂದು ಎಲ್ಲೆಡೆ ಕೇರಳಂ ಎಂದು ಕರೆಯುವಂತೆ ಮಾಡಬೇಕು’ ಎಂದು ಮುಖ್ಯಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಕೇರಳ ಏಕೆ ಬೇಡ?

1956ರ ನವೆಂಬರ್ 1ರಂದು ಭಾಷೆಯನ್ನು ಆಧರಿಸಿ ರಾಜ್ಯಗಳನ್ನು ರಚಿಸಲಾಯಿತು. ಕೇರಳದ ಜನ್ಮದಿನವೂ ನವೆಂಬರ್ 1 ರಂದು. ಮಲಯಾಳಂ ಮಾತನಾಡುವ ಸಮುದಾಯಗಳಿಗೆ ಅಖಂಡ ಕೇರಳವನ್ನು ರಚಿಸುವ ಅಗತ್ಯವು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಸಮಯದಿಂದಲೂ ಬಲವಾಗಿ ಹೊರಹೊಮ್ಮಿತ್ತು. ಆದರೆ ಹೆಸರು ನಮ್ಮ ರಾಜ್ಯವನ್ನು ಸಂವಿಧಾನದ ಮೊದಲ ಶೆಡ್ಯೂಲ್‌ನಲ್ಲಿ ಕೇರಳ ಎಂದು ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

Join Whatsapp
Exit mobile version