ಪುಂಜಾಲಕಟ್ಟೆ: SDPI ಪಕ್ಷದ ಸಂಸ್ಥಾಪನಾ ದಿನಾಚರಣೆ

Prasthutha|

ಪುಂಜಾಲಕಟ್ಟೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ  ಆಫ್ ಇಂಡಿಯಾ ಪುಂಜಾಲಕಟ್ಟೆ, ಕುಕ್ಕಳ ಬೂತ್ ಸಮಿತಿ ವತಿಯಿಂದ  ಪಕ್ಷದ 16ನೇ  ವರ್ಷದ ಸಂಸ್ಥಾಪನ ದಿನಾಚರಣೆಯ ಪ್ರಯುಕ್ತ  “ದ್ವಜಾರೋಹಣ ಕಾರ್ಯಕ್ರಮ”ವು  ಪುಂಜಾಲಕಟ್ಟೆ ಜಂಕ್ಷನ್ ನಲ್ಲಿ ನಡೆಯಿತು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ಕುಕ್ಕಳ ಬೂತ್ ಅಧ್ಯಕ್ಷರಾದ ಝಕರಿಯ್ಯಾ ಪುಂಜಾಲಕಟ್ಟೆ ವಹಿಸಿ ಧ್ವಜಾರೋಹಣಾಗೈದರು.

ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನಸಭಾ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ ಸಂದೇಶ ಭಾಷಣ ಮಾಡಿದರು.

- Advertisement -

ಕಾರ್ಯಕ್ರಮದಲ್ಲಿ ಪಕ್ಷದ ಹಿತೈಷಿ  ಊರಿನ ಹಿರಿಯರೂ ಆದ ಉಮರ್ ಪುಂಜಾಲಕಟ್ಟೆ, ಮಡಂತ್ಯಾರ್ ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ, ಬದ್ರಿಯಾ ಜುಮಾ ಮಸೀದಿ ಪುಂಜಾಲಕಟ್ಟೆ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಮಲ್ಪೆ, ನುಸ್ರತುಲ್ ಇಸ್ಲಾಂ ಯಂಗ್ಮೆನ್ಸ್ ಅಸೋಸಿಯೇಷನ್ ಪುಂಜಾಲಕಟ್ಟೆ ಅಧ್ಯಕ್ಷರಾದ ನೌಷಾದ್ ಇಂಜಿನಿಯರ್, ಕಾವೇರಿ ಟ್ರೇಡರ್ಸ್ ಮಾಲಕರಾದ ಯಹ್ಯಾ, MRS ಕಾಂಪ್ಲೆಕ್ಸ್ ಮಾಲಕರಾದ ಉಮರ್ ಉಪಸ್ಥಿತರಿದ್ದರು.

Join Whatsapp
Exit mobile version