Home ಟಾಪ್ ಸುದ್ದಿಗಳು ಬಂಡೆಮಠ ಸ್ವಾಮಿ ಆತ್ಮಹತ್ಯೆ ಪ್ರಕರಣ: ಮಹಿಳೆಯ ಜೊತೆಗಿನ ವೀಡಿಯೋ ಕಾಲ್ ವೈರಲ್

ಬಂಡೆಮಠ ಸ್ವಾಮಿ ಆತ್ಮಹತ್ಯೆ ಪ್ರಕರಣ: ಮಹಿಳೆಯ ಜೊತೆಗಿನ ವೀಡಿಯೋ ಕಾಲ್ ವೈರಲ್

ರಾಮನಗರ: ಬಂಡೆಮಠದ ಬಸವಲಿಂಗ ಸ್ವಾಮಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಂದಿಗೆ ವೀಡಿಯೋ ಕಾಲ್‍ ನಲ್ಲಿ ಮಾತನಾಡುತ್ತಿದ್ದ ಅಶ್ಲೀಲ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಬಂಡೆಮಠದ ಶ್ರೀ ಅವರು 2 ಪುಟಗಳ ಡೆತ್ ನೋಟ್ ಕೂಡಾ ಬರೆದಿದ್ದು, ಅದರಲ್ಲೂ ಹಲವರ ಹೆಸರನ್ನು ಬರೆದಿದ್ದರು.

ಸ್ವಾಮಿ ಸಾವಿಗೆ ಬೆದರಿಕೆಯೇ ಕಾರಣ ಎಂಬ ಅನುಮಾನಗಳು ಕಂಡುಬಂದಿದ್ದು, ನೇಣಿಗೆ ಶರಣಾಗುವ ಮುನ್ನ ಶ್ರೀಗಳನ್ನು ಇಬ್ಬರು ವ್ಯಕ್ತಿಗಳು ಭೇಟಿ ಆಗಿದ್ದ ವಿಚಾರ ಬೆಳಕಿಗೆ ಬಂದಿತ್ತು. ಆದರೆ ಆ ಇಬ್ಬರು ವ್ಯಕ್ತಿಗಳು ಯಾರು ಎಂಬುದು ಇನ್ನೂ ಬಯಲಾಗಿಲ್ಲ.

Join Whatsapp
Exit mobile version