ರಾಹುಲ್ ಗಾಂಧಿ ಟೀಕಿಸಿದ್ದು ಹಿಂದೂಗಳನ್ನು ಅಲ್ಲ: ಪ್ರಿಯಾಂಕ ಗಾಂಧಿ

Prasthutha|

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಸದನದಲ್ಲಿ ಹಿಂದೂಗಳನ್ನು ಹಿಂಸಾತ್ಮಕ ಎಂದು ಕರೆದಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿರುವುದನ್ನು ರಾಹುಲ್ ಸಹೋದರಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಖಂಡಿಸಿದ್ದಾರೆ. ಸಹೋದರ ರಾಹುಲ್ ಗಾಂಧಿ ಟೀಕಿಸಿದ್ದು ಹಿಂದೂಗಳನ್ನು ಅಲ್ಲ. ಅವರು ಹಿಂದೂಗಳನ್ನು ಅವಮಾನಿಸಿಲ್ಲ. ಬಿಜೆಪಿ ಮತ್ತು ಅದರ ನಾಯಕರ ಕುರಿತು ಅವರು ಮಾತನಾಡಿದ್ದಾರೆ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.

- Advertisement -

ಸಂಸತ್‌ ಭವನದಿಂದ ಹೊರಟ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಅವರು, ಹಿಂದೂಗಳನ್ನು ರಾಹುಲ್ ಗಾಂಧಿ ಅವಮಾನಿಸಲು ಸಾಧ್ಯವೇ ಇಲ್ಲ. ಬಿಜೆಪಿ ಬಗ್ಗೆ ಹಾಗೂ ಪಕ್ಷದ ನಾಯಕರ ಬಗ್ಗೆ ರಾಹುಲ್‌ ಗಾಂಧಿ ಮಾತನಾಡಿದ್ದಾರೆ ಎಂದಿದ್ದಾರೆ.

ಇಂದು ಲೋಕಸಭೆಯಲ್ಲಿ ಶಿವನ ಫೋಟೋವನ್ನು ಹಿಡಿದು ಮಾತನಾಡಿದ್ದ ರಾಹುಲ್ ಗಾಂಧಿ, ನಮ್ಮ ಮಹಾಪುರುಷರೆಲ್ಲರೂ ಅಹಿಂಸೆಯ ಬಗ್ಗೆ ಮಾತನಾಡಿದ್ದಾರೆ. ಆದರೆ ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವ ಕೆಲವರು ಹಿಂಸೆ, ದ್ವೇಷ, ಅಸತ್ಯದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಅವರು ಯಾವುದೇ ರೀತಿಯಲ್ಲಿ ಹಿಂದೂ ಅಲ್ಲ ಎಂದು ಬಿಜೆಪಿ ನಾಯಕರತ್ತ ಕೈ ತೋರಿಸಿ ಹೇಳಿದ್ದರು.

- Advertisement -

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆಯುವುದು ಅತ್ಯಂತ ಗಂಭೀರವಾದ ಆರೋಪವಾಗಿದೆ ಎಂದು ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ನೀಡಿದ್ದ ರಾಹುಲ್ ಗಾಂಧಿ, ನಾನು ಪ್ರಧಾನಿ ಮೋದಿ, ಬಿಜೆಪಿ-ಆರ್‌ಎಸ್‌ಎಸ್​ ಹಿಂಸಾತ್ಮಕ ಧೋರಣೆ ತಳೆದಿದೆ ಎಂದು ಹೇಳಿದ್ದೇನೆ. ಮೋದಿ, ಆರ್​ಎಸ್​ಎಸ್​, ಬಿಜೆಪಿ ಮಾತ್ರ ಹಿಂದೂ ಸಮುದಾಯವಲ್ಲ ಎಂದು ತಿರುಗೇಟು ನೀಡಿದ್ದರು.

Join Whatsapp
Exit mobile version