ಶ್ರೀಲಂಕಾ ನೂತನ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಆಯ್ಕೆ

Prasthutha|

ಕೊಲಂಬೊ: ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಆಯ್ಕೆಯಾಗಿದ್ದಾರೆ.

- Advertisement -

ರಾನಿಲ್ ವಿಕ್ರಮಸಿಂಘೆ ಅವರು ಶ್ರೀಲಂಕಾದ 8ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರು ಒಟ್ಟು 134 ಮತಗಳನ್ನು ಪಡೆದಿದ್ದಾರೆ.

ಶ್ರೀಲಂಕಾದ ಹಿಂದಿನ ಅಧ್ಯಕ್ಷ ಗೊಟಬಯ ರಾಜಪಕ್ಸ ವಿರುದ್ಧ ಜನರು ದಂಗೆ ಎದ್ದ ಕಾರಣ ದೇಶ ಬಿಟ್ಟು ಪರಾರಿಯಾಗಿದ್ದಲ್ಲದೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ರಾನಿಲ್​​ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗಿದ್ದರು.

- Advertisement -

ಇಂದು ಸಂಸತ್ತಿನಲ್ಲಿ ಬಿಗಿ ಬಂದೋಬಸ್ತ್​ನಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ವಿಕ್ರಮಸಿಂಘೆಗೆ ಅಧಿಕ ಮತಗಳು ಬಿದ್ದವು. ಇನ್ನುಳಿದಂತೆ ಡಲ್ಲಾಸ್ ಅಲಹೆಪ್ಪುರುಮಾ ಮತ್ತು ಅನುರಾ ಕುಮಾರಾ ಡಿಸ್ಸನಾಯಕೆ ಅಲ್ಪ ಮತ ಗಳಿಸಿದರು. ಪ್ರತಿಪಕ್ಷಗಳ ಮುಖಂಡ ಸಜಿತ್ ಪ್ರೇಮದಾಸ ಮತದಾನಕ್ಕೂ ಮೊದಲೇ ಅಧ್ಯಕ್ಷ ಚುನಾವಣೆಯಿಂದ ಹಿಂದೆ ಸರಿದಿದ್ದರು. ಇಂದು ನಡೆದ ಮತದಾನದ ವೇಳೆ ಸದನದೊಳಗೆ ಸಂಸದರಿಗೆ ಮೊಬೈಲ್ ತರುವುದಕ್ಕೂ ಅವಕಾಶ ನಿರಾಕರಿಸಲಾಗಿತ್ತು.

Join Whatsapp
Exit mobile version