Home ಟಾಪ್ ಸುದ್ದಿಗಳು ‘ಅತಿ ಬುದ್ಧಿವಂತರ ಜೊತೆ ಆಡಳಿತ ನಡೆಸುವುದು ಕಷ್ಟ’: ಪ್ರತಾಪ ಸಿಂಹ ಬಳಿ ಸಿಟ್ಟಾದ ಸಿಎಂ….!

‘ಅತಿ ಬುದ್ಧಿವಂತರ ಜೊತೆ ಆಡಳಿತ ನಡೆಸುವುದು ಕಷ್ಟ’: ಪ್ರತಾಪ ಸಿಂಹ ಬಳಿ ಸಿಟ್ಟಾದ ಸಿಎಂ….!

ಬೆಂಗಳೂರು: ಮೈಸೂರು ದಸರಾ ಹಿನ್ನೆಲೆಯಲ್ಲಿ ಮಂಗಳವಾರ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಮುಜುಗರಕ್ಕೆ ಒಳಗಾದ ಪ್ರಸಂಗ ನಡೆದಿದೆ.

ಸುದ್ದಿಗೋಷ್ಠಿಯ ವೇಳೆ ಕೊಡಗು ಹಾಗೂ ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ತಮ್ಮ ಕ್ಷೇತ್ರದ ಅಭಿವೃದ್ಧಿಯ ಅನುಮೋದನೆ ಪತ್ರಕ್ಕೆ ಸಹಿ ಪಡೆಯಲು ಸಿಎಂ ಬಸವರಾಜ್ ಬೊಮ್ಮಾಯಿ ಬಳಿ ಬಂದಿದ್ದರು. ಸಿಎಂ ಅನುಮೋದನೆ ಪತ್ರಕ್ಕೆ ಸಹಿ ಪಡೆದ ಬಳಿಕ ಅದೇ ಪತ್ರ ಹಾಗೂ ಸಿಎಂ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಕೋಪಗೊಂಡ ಸಿಎಂ ನನ್ನ ಮೇಲೆ ನಂಬಿಕೆ ಇಲ್ವಾ? ನಂಬಿಕೆ ಇಲ್ಲ ಅಂದರೆ ತೆಗೆದುಕೊಂಡು ಹೋಗು ಎಂದು ಹೇಳಿದ್ದಾರೆ. ಆಗ ಪ್ರತಾಪ್ ಸಿಂಹ ಸಮಜಾಯಿಸಿ ನೀಡಲು ಬಂದಾಗ ಮತ್ತೆ ಸಿಎಂ ಬೇಸರ ವ್ಯಕ್ತಪಡಿಸಿ, ಅತೀ ಬುದ್ಧಿವಂತರ ಜೊತೆ ಆಡಳಿತ ಮಾಡುವುದು ಕಷ್ಟ ಎಂದು ಮುಖ ತಿರುಗಿಸಿಕೊಂಡರು.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟ್ರೋಲ್ ಗೆ ಒಳಗಾಗುತ್ತಿದೆ.

Join Whatsapp
Exit mobile version