ಮಹಿಳಾ ದಿನಾಚರಣೆ ಪ್ರಯುಕ್ತ ಮಾ.8ರಂದು ವಂಡರ್ ಲಾದಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶ

Prasthutha|

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಂಡರ್‌ ಲಾದಲ್ಲಿ ಮಾರ್ಚ್‌ 8 ರಂದು ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶವಿದ್ದು, ಒಂದು ಟಿಕೆಟ್ ಖರೀದಿಸಿದರೆ ಮತ್ತೊಬ್ಬರಿಗೆ ಉಚಿತ ಪ್ರವೇಶ ಘೋಷಿಸಿದೆ.

- Advertisement -

ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ವಂಡರ್‌ ಲಾ ಆ ದಿನದಂದು ಕೇವಲ ಮಹಿಳೆಯರು ಹಾಗೂ ಯುವತಿಯರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. 10 ವರ್ಷ ಒಳಗಿನ ಗಂಡು ಮಕ್ಕಳಿಗೆ ಪ್ರವೇಶವಿದ್ದು, ಉಳಿದಂತೆ ಯಾವ ಪುರುಷರಿಗೂ ಆ ದಿನ ಪ್ರವೇಶವಿರುವುದಿಲ್ಲ.

ಇದಷ್ಟೆ ಅಲ್ಲದೆ, ವಂಡರ್‌ ಲಾ ರೆಸಾರ್ಟ್‌ ನಲ್ಲಿಯೂ ಸಹ ಮಹಿಳೆಯರಿಗೆ ವಿಶೇಷ ಆಫರ್‌ ಗಳನ್ನು ಘೋಷಿಸಲಾಗಿದೆ. ರೆಸಾರ್ಟ್ ರೂಮ್‌ ಬುಕ್ಕಿಂಗ್ ಮೇಲೆ ಒನ್‌ ಪ್ಲಸ್ ಒನ್ ಆಫರ್ ನೀಡಲಾಗಿದೆ. ರೆಸಾರ್ಟ್‌ ಹಾಗೂ ಪಾರ್ಕ್‌ ಎರಡೂ ಕಡೆ ಬುಕ್ಕಿಂಗ್ ಮಾಡುವವರಿಗೂ ಸಹ ವಿಶೇಷ ಪ್ಯಾಕೇಜ್ ನೀಡಲಾಗುತ್ತಿದೆ. ಈ ಮೂಲಕ ಮಹಿಳೆಯರ ದಿನವನ್ನು ವಂಡರ್‌ ಲಾ ವಿಭಿನ್ನ ಹಾಗೂ ಅವರಿಗಾಗಿ ಸಂಪೂರ್ಣ ಮನರಂಜನೆ ನೀಡಲು ಮುಂದಾಗಿದೆ. ಹೆಚ್ಚಿನ ವಿವರಗಳಿಗಾಗಿ 9945500011 ಅಥವಾ apps.wonderla.co.in/wd/ ವೆಬ್‌ಸೈಟ್‌ಗೆ  ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.



Join Whatsapp
Exit mobile version