Home ಟಾಪ್ ಸುದ್ದಿಗಳು ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದ ಮಹಿಳೆಯ ಸಾವಿನ ಬಗ್ಗೆ ಅನುಮಾನ: ನಾಗಲಕ್ಷ್ಮಿ ಚೌಧರಿ

ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದ ಮಹಿಳೆಯ ಸಾವಿನ ಬಗ್ಗೆ ಅನುಮಾನ: ನಾಗಲಕ್ಷ್ಮಿ ಚೌಧರಿ


ಮೈಸೂರು: ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರು, 17 ವರ್ಷ ವಯಸ್ಸಿನ ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದ ಮಹಿಳೆಯ ಸಾವಿನ ತನಿಖೆಯ ಮಾಹಿತಿಯನ್ನು ಒದಗಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದೇನೆ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಇರಲಿ ಅಥವಾ ಜನಸಾಮಾನ್ಯರೇ ಇರಲಿ, ತಪ್ಪು ಮಾಡಿದ್ದರೆ ಯಾರನ್ನೂ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ಸಾವಿನ ಬಗ್ಗೆ ಆಕೆಯ ಕುಟುಂಬದವರು ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಸಾವಿಗೀಡಾಗುವ ಎರಡು ದಿನಗಳ ಹಿಂದೆಯಷ್ಟೇ ಆಕೆ ನನ್ನನ್ನು ಭೇಟಿಯಾಗಿದ್ದರು. ಕ್ಯಾನ್ಸರ್‌ನಿಂದ ದಿಢೀರ್ ಸಾವು ಹೇಗೆ ಉಂಟಾಗುತ್ತದೆ ಎಂಬುದೇ ಪ್ರಶ್ನೆ. ಮೃತದೇಹದ ಹಸ್ತಾಂತರದ ವೇಳೆಯೂ ಹಲವು ಲೋಪಗಳಾಗಿವೆ. ಇದು ಕೂಡ ಅನುಮಾನಕ್ಕೆ ಕಾರಣವಾಗಿದೆ’ ಎಂದರು.

ತಾಯಿಯದ್ದು ಸಹಜ ಸಾವಲ್ಲ ಎಂದು ಹುಳಿಮಾವು ಠಾಣೆಯಲ್ಲಿ ಕುಟುಂಬದವರು ನೀಡಿದ ದೂರು ಆಧರಿಸಿದ ತನಿಖೆಯ ಪ್ರಗತಿ ವರದಿಯನ್ನು 15 ದಿನಗಳಲ್ಲಿ ನೀಡುವಂತೆ ಕೋರಿದ್ದೇನೆ. ಸದ್ಯ ಪ್ರಕರಣದ ತನಿಖೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದರು.

Join Whatsapp
Exit mobile version