ಆಗ್ರಾದಲ್ಲಿ ಭಾರೀ ಮಳೆ: ತಾಜ್ ಮಹಲ್’ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆ

Prasthutha|

ಆಗ್ರಾ: ಆಗ್ರಾದಲ್ಲಿ ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ನ ಮುಖ್ಯ ಗುಮ್ಮಟದಲ್ಲಿ ನೀರು ಸೋರುತ್ತಿದ್ದು, ಆವರಣದಲ್ಲಿರುವ ಉದ್ಯಾನಕ್ಕೂ ನೀರು ನುಗ್ಗಿದೆ.

- Advertisement -


ಗುರುವಾರ ತಾಜ್ ಮಹಲ್ ಆವರಣದಲ್ಲಿರುವ ಉದ್ಯಾನ ಮುಳುಗಡೆಯಾಗಿರುವ ವಿಡಿಯೋ ವೈರಲ್ ಆಗಿದ್ದು, ಪ್ರವಾಸಿಗರ ಗಮನ ಸೆಳೆದಿದೆ.


ಆಗ್ರಾ ವೃತ್ತದ ಭಾರತೀಯ ಪುರಾತತ್ವ ಸರ್ವೇಕ್ಷಣೆ(ಎಎಸ್ ಐ)ಯ ಹಿರಿಯ ಅಧಿಕಾರಿಯೊಬ್ಬರು, ಸೋರಿಕೆಯಿಂದಾಗಿ ಮುಖ್ಯ ಗುಮ್ಮಟಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿದ್ದಾರೆ.

- Advertisement -


ತಾಜ್ಮಹಲ್ನ ಮುಖ್ಯ ಗುಮ್ಮಟದಲ್ಲಿನ ಸೋರಿಕೆ ಕುರಿತು ಮಾತನಾಡಿದ ಆಗ್ರಾ ವೃತ್ತದ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್ಐ) ಅಧೀಕ್ಷಕ ರಾಜ್ಕುಮಾರ್ ಪಟೇಲ್ ಅವರು, “ಹೌದು, ತಾಜ್ ಮಹಲ್ನ ಮುಖ್ಯ ಗುಮ್ಮಟದಲ್ಲಿ ಸೋರಿಕೆಯಾಗಿರುವುದನ್ನು ನಾವು ನೋಡಿದ್ದೇವೆ. ನಾವು ಪರಿಶೀಲಿಸಿದಾಗ ಸೋರಿಕೆಯಿಂದಾಗಿ ಮುಖ್ಯ ಗುಮ್ಮಟಕ್ಕೆ ಯಾವುದೇ ಹಾನಿಯಾಗಿಲ್ಲ. ನಾವು ಡ್ರೋನ್ ಕ್ಯಾಮೆರಾ ಮೂಲಕ ಮುಖ್ಯ ಗುಮ್ಮಟವನ್ನು ಪರಿಶೀಲಿಸಿದ್ದೇವೆ ಎಂದು ತಿಳಿಸಿದರು.



Join Whatsapp
Exit mobile version