ವಿಷರಹಿತ ಹಾವೆಂದು ಹಿಡಿಯಲು ಹೋಗಿ ಕೈಗೆ ಕಚ್ಚಿದ ಕನ್ನಡಿ ಹಾವು: ವ್ಯಕ್ತಿ ಮೃತ್ಯು

Prasthutha|

ಸಾಂದರ್ಭಿಕ ಚಿತ್ರ

- Advertisement -

ಮಂಗಳೂರು: ವಿಷರಹಿತ ಹಾವೆಂದು ತಪ್ಪಾಗಿ ತಿಳಿದು ಕನ್ನಡಿ ಹಾವನ್ನು ಕೈಯಲ್ಲಿ ಹಿಡಿದ ವೇಳೆ ಕೈಗೆ ಕಚ್ಚಿ ವ್ಯಕ್ತಿ ಮೃತಪಟ್ಟ ಘಟನೆ ಬಜ್ಪೆಯಲ್ಲಿ ನಡೆದಿದೆ.


ಬಜ್ಪೆಯ ರಾಮಚಂದ್ರ ಪೂಜಾರಿ(55) ಮೃತರು.

- Advertisement -


ಗುರುವಾರ ಇಲ್ಲಿನ ಪರಿಸರದಲ್ಲಿ ಕನ್ನಡಿ ಹಾವೊಂದು ಕಾಣಿಸಿಕೊಂಡಿತ್ತು. ಇದನ್ನು ರಾಮಚಂದ್ರ ಪೂಜಾರಿ ಅವರು ವಿಷರಹಿತ ಹಾವೆಂದು ತಪ್ಪಾಗಿ ತಿಳಿದು ಕೈಯಲ್ಲಿ ಹಿಡಿದಿದ್ದಾರೆ. ಆದರೆ ಈ ವೇಳೆ ಹಾವು ರಾಮಚಂದ್ರ ಅವರ ಕೈಗೆ ಕಚ್ಚಿದೆ, ಇದನ್ನು ಗಂಭೀರವಾಗಿ ಪರಿಗಣಿಸದ ರಾಮಚಂದ್ರ ಅವರು ಮನೆಗೆ ತೆರಳಿದ್ದರು. ಆದರೆ ಸಂಜೆಯಾಗುತ್ತಲೇ ಅವರ ಅರೋಗ್ಯ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಇಂದು ಶುಕ್ರವಾರ ಮೃತಪಟ್ಟಿದ್ದಾರೆ ಎನ್ನಲಾಗಿದೆ.



Join Whatsapp
Exit mobile version