ದಕ್ಷಿಣ ಕನ್ನಡ ಜಿಲ್ಲೆಯಲ್ಲೊಂದು ಧರ್ಮ ರಕ್ಷಣಾ ಕಾರ್ಯ: ನೀರಿಗೆ ಬಿದ್ದ ಶರೀಫ್ ನನ್ನು ರಕ್ಷಿಸಿದ ಸೋಮಶೇಖರ್

Prasthutha|

ಕಡಬ: ಕೋಮು ಸೂಕ್ಷ್ಮ ಪ್ರದೇಶ ಎಂದು ಗುರುತಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಕೋಮು ಸಾಮರಸ್ಯಕ್ಕೇನು ಕೊರತೆಯಿಲ್ಲ. ಆದರೆ ಕೋಮುವಾದ ಪ್ರಚಾರಕ ಮಾಧ್ಯಮಗಳಲ್ಲಿ ಅವು ಸುದ್ದಿ, ಡಿಬೇಟ್ ಆಗುವುದಿಲ್ಲ.

- Advertisement -


ಕೋಮು ಸಾಮರಸ್ಯದ ಘಟನೆ ದ.ಕ. ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ. ಭಾರಿ ಮಳೆಯ ಪ್ರವಾಹದಿಂದ ನೀರಿಗೆ ಬಿದ್ದ ಯುವಕ ಶರೀಫ್ ನನ್ನು ಜೀವದ ಹಂಗು ತೊರೆದು ಸೋಮಶೇಖರ್ ಎಂಬವರು ರಕ್ಷಿಸಿ ಮಾನವೀಯತೆ ಮೆರೆಯುವ ಮೂಲಕ ಸೌಹಾರ್ದತೆಯ ಸಂದೇಶವನ್ನು ಸಾರಿದ್ದಾರೆ.


ಹರಿಹರಪಳ್ಳತ್ತಡ್ಕ ಸೇತುವೆ ಮೇಲೆ ಸಿಲುಕಿದ್ದ ಮರಗಳನ್ನು ಜೆಸಿಬಿ ತೆರವುಗೊಳಿಸುತ್ತಿತ್ತು. ಈ ಸಂದರ್ಭದಲ್ಲಿ ಕ್ರೇನ್ ಆಪರೇಟರ್ ಶರೀಫ್ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದ್ದಾರೆ.ತಕ್ಷಣವೇ ನದಿಗೆ ಹಾರಿ ಶರೀಫ್ ಅವರನ್ನು ಸೋಮಶೇಖರ್ ರಕ್ಷಿಸಿದ್ದಾರೆ ಈ ಮೂಲಕ ಧರ್ಮದ ನಡುವೆ ಸಂಘರ್ಷಗಳು ಹೆಚ್ಚುತ್ತಿರುವ ಕಾಲದಲ್ಲಿ ಇಂತಹ ಘಟನೆ ಸೌಹಾರ್ದತೆಯ ಸಂದೇಶವನ್ನು ಸಾರಿದೆ.

- Advertisement -


ಆಗಸ್ಟ್ 2 2021ರಲ್ಲಿ ವಿದ್ಯಾಪುರ ಪ್ರೌಢ ಶಾಲೆಯ ಬಳಿ ವಿದ್ಯುತ್ ಕಂಬದಲ್ಲಿ ದುರಸ್ತಿ ಮಾಡುತ್ತಿದ್ದ ಬಿಪಿನ್ ಮತ್ತು ರುಕ್ಮಯ್ಯ ಎಂಬವರು ವಿದ್ಯುತ್ ಆಘಾತಕ್ಕೊಳಗಾದರು. ಈ ಸಂದರ್ಭದಲ್ಲಿ ಈದ್ ಹಬ್ಬದ ಪ್ರಯುಕ್ತ ಪ್ರೌಢ ಶಾಲೆಯ ಹತ್ತಿರದ ಮನೆಗೆ ಬಂದಿದ್ದ ಸಂಶೀರ್ ಶಾಫಿ, ಇರ್ಫಾನ್ ಮತ್ತು ತೌಸಿಫ್ ಎಂಬವರು ತಕ್ಷಣ ಅವರಲ್ಲಿಗೆ ಧಾವಿಸಿ ಆ ಯುವಕರನ್ನು ರಕ್ಷಿಸಿದ್ದಾರೆ. ಅದರಲ್ಲೂ ಕೊರೋನಾ ಎಂಬ ಮಹಾ ಮಾರಿಗೆ ಹೆದರಿ ಪರಸ್ಪರ ಹತ್ತಿರ ನಿಲ್ಲಲೂ ಹೆದರುತ್ತಿರುವ ಈ ಕಾಲದಲ್ಲಿ ತನ್ನ ಬಾಯಿಯನ್ನು ಆಘಾತಕ್ಕೊಳಗಾದ ಸಂತ್ರಸ್ತನ ಬಾಯಿಗೆ ಇಟ್ಟು ಉಸಿರನ್ನು ನೀಡಿ ಬದುಕಿಸಿದ್ದು ನಮ್ಮಲ್ಲಿ ಇನ್ನೂ ಮಾನವೀಯತೆ ಜೀವಂತ ಇದೆ ಎಂಬುವುದಕ್ಕೆ ಸಾಕ್ಷಿಯಾಗಿತ್ತು.

Join Whatsapp
Exit mobile version